Advertisement
ವಿರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ಕೊಟ್ಟಚ್ಚಿ ವಸಂತ (45) ಮೃತಪಟ್ಟವರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲೆಯ ಜಗಲಿ ಯಲ್ಲಿ ಶವ ಪತ್ತೆಯಾಗಿದೆ.
Related Articles
Advertisement
ಸ್ಥಳದಲ್ಲಿ ಎರಡು ಮದ್ಯದ ಪ್ಯಾಕೆಟ್, ಒಂದು ಸಿಮ್ ಕಾರ್ಡ್ ಪತ್ತೆಯಾಗಿದೆ. ಶವದ ಅಲ್ಪ ದೂರಲ್ಲೇ ಕಲ್ಲಿನ ತುಂಡೊಂದು ಪತ್ತೆಯಾಗಿದ್ದು, ಅದರಲ್ಲೂ ರಕ್ತದ ಕಲೆ ಕಂಡು ಬಂದಿದೆ. ಪತ್ತೆಯಾದ ಸಿಮ್ ಕಾರ್ಡ್ ವಾರಸುದಾರರನ್ನು ಸಂಪರ್ಕಿಸಿದ ವೇಳೆ ಮೊಬೈಲ್ ಕಳೆದುಹೋಗಿರುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ವಾರದಲ್ಲಿ ಎರಡನೇ ಘಟನೆ
ವಾರದ ಅಂತರದಲ್ಲಿ ಸುಳ್ಯ ತಾಲೂಕಿನಲ್ಲಿ ಎರಡು ಕೊಲೆ ಪ್ರಕರಣ ನಡೆದಂತಾಗಿದೆ. ಕಳೆದ ರವಿವಾರ ರಾತ್ರಿ (ಜೂ.9) ಬೆಳ್ಳಾರೆ ಮಾರುಕಟ್ಟೆಯಲ್ಲಿ ನಳಿನಿ ಎಂಬ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ನಡೆಸಲಾಗಿತ್ತು. ಈ ಸಂಬಂಧ ಕಲ್ಮಡ್ಕದ ಜಯರಾಮ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಏಳು ತಿಂಗಳ ಹಿಂದೆ ಮನೆ ಬಿಟ್ಟಿದ್ದ
7 ತಿಂಗಳ ಹಿಂದೆ ಮನೆ ಬಿಟ್ಟಿದ್ದ ವ್ಯಕ್ತಿ ಮತ್ತೆ ಮನೆಗೆ ಹೋಗಿರಲಿಲ್ಲ. ವಿಪರೀತ ಮದ್ಯ ಸೇವಿಸುತ್ತಿದ್ದ ಎನ್ನಲಾಗಿದೆ. 15 ವರ್ಷಗಳ ಹಿಂದೆ ವಿವಾಹವಾಗಿದ್ದ ಈತನ ಇಬ್ಬರು ಪುತ್ರರು ಆಲೆಟ್ಟಿ ಆಶ್ರಮ ಶಾಲೆಯಲ್ಲಿ ಓದುತ್ತಿದ್ದಾರೆ.