Advertisement

ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇಗುಲದ ಹುಂಡಿಯಲ್ಲಿ 1.7 ಲಕ್ಷ ರೂ.

03:16 PM Jan 07, 2021 | Team Udayavani |

ಹನೂರು: ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ ಹುಂಡಿಯಲ್ಲಿ 1.69 ಲಕ್ಷ ರೂ. ಸಂಗ್ರಹವಾಗಿದೆ.
ಕಿಚ್ಚುಗುತ್ತು ಮಾರಮ್ಮ ದೇವಾಲಯದ ಹಿಂಭಾಗದ ಭಕ್ತಾದಿಗಳ ತಂಗುದಾಣದ ಹಿಂಭಾಗದಲ್ಲಿ ಜರುಗಿದ ಹುಂಡಿಎಣಿಕೆ ಪ್ರಕ್ರಿಯೆ ತಹಶೀಲ್ದಾರ್‌ ನಾಗರಾಜು ಅಧ್ಯಕ್ಷತೆಯಲ್ಲಿ ಜರುಗಿತು.

Advertisement

ಹುಂಡಿ ಎಣಿಕೆಯಲ್ಲಿ 1,69,600 (ಒಂದು ಲಕ್ಷದ ಅರವತ್ತೂಂಭತ್ತು ಸಾವಿರದ ಆರುನೂರು) ರೂ. ನಗದು ಸಂಗ್ರಹವಾಗಿದೆ.
ಹುಂಡಿಗಳಲ್ಲಿ ಸಂಗ್ರಹವಾಗಿದ್ದ ನಗದನ್ನು ಎಣಿಕೆ ಪ್ರಕ್ರಿಯೆಯ ಬಳಿಕ ಮಾರ್ಟಳ್ಳಿ ಗ್ರಾಮದ ಕಾವೇರಿ ಕಲ್ಪತರು ಗ್ರಾಮೀಣ
ಬ್ಯಾಂಕಿನಲ್ಲಿ ಜಮೆ ಮಾಡಲಾಗಿದೆ. ಹುಂಡಿ ಎಣಿಕೆ ಪ್ರಕ್ರಿಯೆಗೆ ರಾಮಾಪುರ ಪೊಲೀಸರಿಂದ ಬಿಗಿಬಂದೋಬಸ್ತ್ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್‌ ಸುರೇಖಾ, ಆರ್‌ಐ ರಂಗಸ್ವಾಮಿ, ಗ್ರಾಮಲೆಕ್ಕಿಗರಾದ ವಿನೋದ್‌, ರಂಗಸ್ವಾಮಿ, ಶಿವ
ಕುಮಾರ್‌, ನಾರಾಯಣಸ್ವಾಮಿ, ಶಿವರಾಜು, ದಿನೇಶ್‌ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

ಇದನ್ನೂ ಓದಿ:ಗುಂಡ್ಲುಪೇಟೆ: ಅಡವಿಮಠಕ್ಕೆ ಬಂದಿದ್ದ ಜಿಂಕೆ ಮರಳಿ ಕಾಡಿಗೆ

ಕಿಚ್ಚುಗುತ್ತು ಮಾರಮ್ಮ ದೇವಾಲಯವು ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಟ್ಟ ಜರುಗುತ್ತಿರುವ 2ನೇ ಬಾರಿಯ ಹುಂಡಿ ಎಣಿಕೆ ಮತ್ತು ವಿಷಮಿಶ್ರಿತ ಪ್ರಸಾದ ಪ್ರಕರಣದ ಬಳಿಕ ಸಾರ್ವಜನಿಕ ದರ್ಶನಕ್ಕೆ ಲಭ್ಯವಾದ ಬಳಿಕ ನಡೆದ ಚೊಚ್ಚಲ ಹುಂಡಿ ಎಣಿಕೆಯಾಗಿದೆ. ದೇವಾಲಯದಲ್ಲಿ ಕುಕೃತ್ಯ ನಡೆದ ಬಳಿಕ 22 ತಿಂಗಳುಗಳ ಕಾಲ ಬಂದ್‌ ಮಾಡಲಾಗಿತ್ತು. ಈ ವೇಳೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡಿಕೊಂಡ ಬಳಿಕ ಸೆಪ್ಟೆಂಬರ್‌ 30ರಂದು ಹುಂಡಿ ಎಣಿಕೆಯು ಜರುಗಿತ್ತು. ಇದಾದ ಬಳಿಕ ಅಕ್ಟೋಬರ್‌ 24ರಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next