Advertisement
ಯುವ ಆಟಗಾರರನ್ನೊಳಗೊಂಡ 18 ಸದಸ್ಯರ ತಂಡವನ್ನು ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ಸುರೇಂದರ್ ಕುಮಾರರ ಆಯ್ಕೆಯಾಗಿದ್ದಾರೆ. ಕೂಟ ಆರಂಭವಾಗುವ ಮುನ್ನವೇ ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದ ಕಾರಣ ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
“ಪ್ರಮುಖ ಆಟಗಾರರು ಗಾಯಾಳಾಗಿರುವುದು ದುರದೃಷ್ಟಕರ.ಅವರೆಲ್ಲ ಮುಂಬರುವ ಎಫ್ಐಎಚ್ ಸೀರೀಸ್ ಫೈನಲ್ ಮುನ್ನ ಫಿಟ್‌ನೆಸ್ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಈ ಕೂಟ 2020 ಒಲಿಂಪಿಕ್ಸ್‌ಗೆ ಅರ್ಹತಾ ಕೂಟವಾಗಿದೆ. ಇದಕ್ಕಾಗಿ ಅವರೆಲ್ಲ ಬೆಂಗಳೂರಿನ ಸಾಯ್‌ನಲ್ಲಿ ತರಬೇತಿ ಮುಂದುವರಿಸಲಿದ್ದಾರೆ. ಅಜ್ಲಾನ್ ಶಾ ಕೂಟಕ್ಕಾಗಿ ತಯಾರಾಗಿರುವ ಭಾರತ ಯುವ ಆಟಗಾರರನ್ನು ಒಳಗೊಂಡಿದೆ’ ಎಂದು ಭಾರತದ ಹಾಕಿ ಫೆಡರೇಶನ್‌ನ ಉನ್ನತ ಪ್ರದರ್ಶನ ಅಧ್ಯಕ್ಷ ಡೇವಿಡ್ ಜಾನ್ ಹೇಳಿದ್ದಾರೆ.
Related Articles
ಗೋಲ್‌ಕೀಪರ್: ಪಿ. ಆರ್. ಶ್ರೀಜೇಶ್, ಕೃಷ್ಣ ಬಿ ಪಾತಾಕ್ ಡಿಫೆಂಡರ್: ಗುರೀಂದರ್ ಸಿಂಗ್, ಸುರೇಂದರ್ ಕುಮಾರ್, ವರುಣ್ ಕುಮಾರ್, ಬಿರೇಂದ್ರ ಲಾಕ್ರಾ, ಅಮಿತ್ ರೋಹಿದಾಸ್, ಕೊತಾಜಿತ್ ಸಿಂಗ್
Advertisement
ಮಿಡ್‌ಫಿಲ್ಡರ್: ಹಾರ್ದಿಕ್ ಸಿಂಗ್, ನೀಲಕಂಠ ಶರ್ಮ, ಸಮೀತ್, ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್ಫಾರ್ವಡರ್: ಮನ್‌ದೀಪ್ ಸಿಂಗ್, ಸಿಮ್ರಾನ್‌ಜಿàತ್ ಸಿಂಗ್, ಗುರ್ಜಾಂತ್ ಸಿಂಗ್, ಶಿಲಾನಂದ್ ಲಾಕ್ರಾ, ಸುಮೀತ್ ಕುಮಾರ್.