ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ತಿರುವಿನಲ್ಲಿ ಪಲ್ಟಿಯಾಗಿರುವ ಘಟನೆ ಜೂ. 30ರಂದು ಸುಳ್ಯ-ಮಾಣಿ ಹೆದ್ದಾರಿಯ ಜಾಳ್ಸೂರು ಗ್ರಾಮದ ಅಡ್ಕಾರು ಬಳಿಯ ಮಾವಿನಕಟ್ಟೆ ಎಂಬಲ್ಲಿ ಸಂಭವಿಸಿದೆ.
Advertisement
ಕನಕಮಜಲಿನ ಅಜಿತ್ ಅವರು ಸುಳ್ಯದಿಂದ ಮನೆಗೆ ತೆರಳುತ್ತಿದ್ದ ವೇಳೆ ಮಳೆಯಿಂದಾಗಿ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ವಾಹನ ಜಖಂಗೊಂಡಿದೆ. ಇದೇ ಪರಿಸರದಲ್ಲಿ ಕಳೆದ ವಾರ ಬಸ್ವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು.
ಇದನ್ನೂ ಓದಿ : ಮೂಡಿಗೆರೆ : ಕಾಡಾನೆ ದಾಳಿ, ಪ್ರಾಣಪಾಯದಿಂದ ಪಾರದ ಎಂಎಸ್ಐಎಲ್ ನೌಕರ