Advertisement

Sullia ವಿದ್ಯುತ್‌ ಕಂಬಕ್ಕೆ ಪಿಕಪ್‌ ಢಿಕ್ಕಿ: ತಪ್ಪಿದ ಅನಾಹುತ

11:52 PM Sep 05, 2023 | Team Udayavani |

ಸುಳ್ಯ: ವಿದ್ಯುತ್‌ ಕಂಬಕ್ಕೆ ಪಿಕಪ್‌ ವಾಹನ ಢಿಕ್ಕಿಯಾಗಿ ಕಂಬ ಮುರಿದು ಪಿಕಪ್‌ ಮೇಲೆ ಬಿದ್ದು, ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

Advertisement

ಪುತ್ತೂರಿನಿಂದ ತರಕಾರಿ ಹೇರಿಕೊಂಡು ಬರುತ್ತಿದ್ದ ಪಿಕಪ್‌ ಕದಿಕಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ವಿದ್ಯುತ್‌ ಕಂಬ ಮುರಿದು ಪಿಕಪ್‌ ವಾಹನದ ಮೇಲೆ ಬಿದ್ದ ಪರಿಣಾಮವಾಗಿ ಕೆಲಕಾಲ ಘನ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಯಿತು.

ವಿದ್ಯುತ್‌ ಕಂಬ ಮುರಿದು ಪಿಕಪ್‌ ಮೇಲೆ ಬಿದ್ದುದರಿಂದ ಪಿಕಪ್‌ನ ಮುಂಭಾಗ ಜಖಂಗೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next