Advertisement
ಸುಳ್ಯ ಕಸಬಾ ಮತ್ತು ಪಂಜ ಪರಿಸರದಲ್ಲಿ ತಲಾ 3 ಮನೆಗಳ ಸಹಿತ ತಾಲೂಕಿನಲ್ಲಿ ಒಟ್ಟು 10 ಮನೆಗಳಿಗೆ ಮರಬಿದ್ದು ಹಾನಿಯಾಗಿದೆ. ಅಮರಮಟ್ನೂರು ಗ್ರಾಮದ ಪೈಲಾರು ಮೋಂಟಿ ಎಂಬವರ ಮನೆಗೆ ಮರಬಿದ್ದು ಶೇ. 50 ಹಾನಿಯಾಗಿದ್ದರೆ, ಇದೇ ಪರಿಸರದ ಅಂಗಾರ ಪೈಲಾರು ಅವರ ಮನೆ ಶೇ.30 ರಷ್ಟು ಹಾನಿಗೊಂಡಿದೆ. ಒಟ್ಟು 3 ಕೃಷಿ ಜಾಗಗಳಲ್ಲಿ ಕೃಷಿಸೊತ್ತು ಹಾನಿಗೀಡಾದ ಬಗ್ಗೆ ಕಂದಾಯ ಇಲಾಖೆಗೆ ವರದಿಯಾಗಿದ್ದರ ಹೊರತಾಗಿಯೂ ವಿವಿಧೆಡೆ ರಬ್ಬರ್, ಕಂಗಿನ ಮರಗಳು ಧರೆಗುರುಳಿ ನಷ್ಟಗೊಂಡ ಬಗ್ಗೆ ವರದಿಯಾಗಿದೆ.
ಜಾಲೂÕರು, ಬೆಳ್ಳಾರೆ, ಗುತ್ತಿಗಾರು ಹಾಗೂ ಸುಳ್ಯ ಪರಿಸರದಲ್ಲಿ 50ಕ್ಕೂ ವಿದ್ಯುತ್ ಕಂಬಗಳು ಧರೆಗುರುಳಿದ್ದು , 2 ಟ್ರಾನ್ಸ್ ಫಾರ್ಮರ್ ಕಂಬಗಳು ಹಾನಿಗೊಂಡು ಒಟ್ಟು 15 ಲಕ್ಷ ರೂ. ನಷ್ಟವಾಗಿರುವುದಾಗಿ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಸುಳ್ಯ ತಾಲೂಕಿನಲ್ಲಿ ಒಟ್ಟು 24.4 ಮಿ.ಮೀ. ಮಳೆಯಾಗಿದೆ. ಬುಧವಾರ ಸಂಜೆ ಮೋಡ ಕವಿದ ವಾತಾವರಣ ಕಂಡುಬಂದಿದ್ದು ಮಳೆಯಾದ ಬಗ್ಗೆ ವರದಿಯಾಗಿಲ್ಲ.