Advertisement
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮ ವಾರ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ರಸ್ತೆ ಅತಿಕ್ರಮಣ ಮತ್ತು ರಸ್ತೆಯಂಚಿನಲ್ಲಿರುವ ಕಟ್ಟಡಗಳ ತೆರವಿಗೆ ಹಿಂದಿನ ಸಭೆ ಕೈಗೊಂಡ ನಿರ್ಣಯದ ಕುರಿತಾಗಿ ಅಜ್ಜಾವರದ ರಸ್ತೆ ಬದಿಯ ಕಟ್ಟಡವನ್ನು ಪ್ರಸ್ತಾಪಿಸಿ ಜಿ.ಪಂ.ಇಂಜಿನಿಯರ್ ಪ್ರೀತಿ ಅವರಲ್ಲಿ ಮಾಹಿತಿ ಬಯಸಿದರು. ಈ ಬಗ್ಗೆ ಅಧಿಕಾರಿಯವರು, ಎಲ್ಲಾ ಪಂಚಾಯತ್‌ಗಳಿಗೂ ನೊಟೀಸ್ ಕಳುಹಿಸಲಾಗಿದೆ ಎಂದು ಚುಟುಕಾಗಿ ಉತ್ತರಿಸಿದರು. ಇದರಿಂದ ಸದಸ್ಯರು ಸಮಾಧಾನವಾಗಲಿಲ್ಲ.
ಈ ಸಂದರ್ಭ ಸ್ವಲ್ಪ ಗರಂ ಆದ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿ.ಪಂ., ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ಸಹಿತ ತರಾಟೆಗೆ ತೆಗೆದುಕೊಂಡರು.
Related Articles
Advertisement
ಈ ಬಗ್ಗೆ ಅಧ್ಯಕ್ಷರೂ ಸಮರ್ಥವಾಗಿ ಮಾತನಾಡುವ ಅಗತ್ಯ ವಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಅಧಿಕಾರಿಗಳು ಮಾತ್ರವಲ್ಲ. ಜನ ಪ್ರತಿನಿಧಿಗಳಿಂದಲೂ ಲೋಪವುಂಟಾ ಗುತ್ತಿದೆ. ಹಲವು ಬಾರಿ ರಸ್ತೆಯಂಚಿನಲ್ಲಿ ಕಟ್ಟಡಕ್ಕೆ ಅನುಮತಿ ಪಡೆಯಲು ನಮ್ಮ ಮೇಲೂ ಸಾಕಷ್ಟು ಒತ್ತಡ ಬರುತ್ತಿದೆ. ನ್ಯಾಯಾಲಯದ ತೀರ್ಪನ್ನೂ ಉಲ್ಲಂ ಸುವ ಪ್ರಕರಣ ಗಳಾಗುತ್ತವೆ ಎಂದರು.
ಅಂತಿಮವಾಗಿ ಕಾರ್ಯನಿರ್ವಹಣಾ ಧಿಕಾರಿಯವರು, ಈ ಬಗ್ಗೆ ಪ್ರತೀ ಪಂಚಾಯತ್‌ನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವರದಿ ತರಿಸಿಕೊಳ್ಳುವಂತೆ ನೀಡಿದ ಸಲಹೆಗೆ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು.
ಸಹಾಯಧನ -ಅಕ್ರಮ ಶಂಕೆಸದಸ್ಯ ಅಬ್ದುಲ್ ಗಫೂರ್ ಅವರು, ಪರಿಶಿಷ್ಠ ಜಾತಿಯ ರೈತಸದಸ್ಯರೋರ್ವರು ಇಲಾಖೆಯಿಂದ ಪಡೆದ ಕೃಷಿಯಂತ್ರೋಪಕರಣ ಖರೀದಿ ವೇಳೆ ಬಿಲ್ ನೀಡದ ಬಗ್ಗೆ ಪ್ರಸ್ತಾಪಿಸಿ ದೊಡ್ಡ ಅಕ್ರಮದ ಶಂಕೆ ವ್ಯಕ್ತಪಡಿಸಿದರು. ಈ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯಿತು. ಇಲಾಖೆಯಲ್ಲಿ ರೈತರಿಗೆ ಶೇ.90 ರಷ್ಟು ಸಹಾಯಧನದಡಿ ನೀಡಬೇಕಿದ್ದರೂ ಅದರಂತೆ ಕೊಟ್ಟಿಲ್ಲ. ಮಾರುಕಟ್ಟೆಯಲ್ಲಿ ಅದಕ್ಕಿಂತ ಕಡಿಮೆ ದರದಲ್ಲಿ ಲಭ್ಯವಿದೆ. ಇದರಿಂದ ರೈತ ಸದಸ್ಯರಿಗೆ ಅನ್ಯಾಯವಾಗಿದೆ ಎಂದು ಹೇಳಿದ ಅಬ್ದುಲ್ ಗಫೂರ್, ಖರೀದಿ ವೇಳೆ ಬಿಲ್ ನೀಡದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು. ಹರೀಶ್ ಕಂಜಿಪಿಲಿ, ಅಶೋಕ್ ನೆಕ್ರಾಜೆ, ಉದಯ್‌ಕೊಪ್ಪಡ್ಕ ಚರ್ಚೆಯಲ್ಲಿ ಪಾಲ್ಗೊಂಡರು. ಸಂಬಂಧಿತ ಅಧಿಕಾರಿಯು, ಮಾರ್ಗ ಸೂಚಿ ಪ್ರಕಾರ ನೀಡಿದ್ದೇವೆ ಎಂದರು. ಈ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪು ಕಂಡುಬಂದರೆ ಯಂತ್ರ ನೀಡಿದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸುವುದು, ಜಿ.ಪಂ.ಗೆ ನಿರ್ಣಯ ಕಳುಹಿಸಿ ಅಲ್ಲಿಯೂ ರೈತರಿಗಾಗುವ ಅನ್ಯಾಯದ ಬಗ್ಗೆ ಚರ್ಚೆ ನಡೆಸುವುದು ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ಸಹಾಯಧನ ನೀಡುವ ಕ್ರಮಗಳಂತೆ ಕೃಷಿ ಇಲಾಖೆಯಲ್ಲೂ ನೀಡಲು ಕ್ರಮ ಜರುಗಿಸುವ ಕುರಿತು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲು ನಿರ್ಣಯಿಸಲಾಯಿತು. ಗ್ರಾ.ಪಂ. ಅಧ್ಯಕ್ಷರ ದೂರು
ಸಭೆಯಲ್ಲಿ ಭಾಗವಹಿಸಿದ್ದ ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ದಿವಾಕರ್ ಮುಂಡೋಡಿ, ಪಿಎಂಜಿಎಸ್‌ವೈ ಯೋಜನೆಯಡಿ ಡಾಮರೀಕರಣಗೊಂಡ ಮಾವಿನಕಟ್ಟೆ-ದೇವ ರಸ್ತೆ¤ಯ ದುರಸ್ತಿಗೆ ಸಂಬಂಧಿತ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ, ಚರಂಡಿ ಕಾಮಗಾರಿಯನ್ನ ಕೈಗೊಂಡಿಲ್ಲ ಎಂದು ದೂರಿದರು. ಮರ್ಕಂಜ ಗ್ರಾ.ಪಂ. ಅಧ್ಯಕ್ಷ ಪಂಚಾಯತ್‌ನಲ್ಲಿ ಗ್ರಾಮಲೆಕ್ಕಿಗರು ಸರಿಯಾಗಿ ಕಚೇರಿಗೆ ಹಾಜರಾಗದಿರುವುದರಿಂದ ಸಾರ್ವಜನಿಕರಿಗ ತೊಂದರೆಯಾಗುತ್ತಿದೆ ಎಂದು ದೂರಿದರು. ಕಳಂಜ, ಅಮರಪಟ್ನೂರು ಪಂಚಾಯತ್ ಅಧ್ಯಕ್ಷರುಗಳೂ ಪಾಲ್ಗೊಂಡಿದ್ದರು.