Advertisement

Sullia: ತಡೆ ಬೇಲಿ ಅವಶೇಷ ತಾಗಿ ಟಯರ್‌ ಪಂಕ್ಚರ್‌

09:08 PM Nov 14, 2023 | Team Udayavani |

ಸುಳ್ಯ,: ನಗರದ ಮುಖ್ಯ ರಸ್ತೆಯ ಫುಟ್ ಪಾತ್ ಗೆ ಅಳವಡಿಸಲಾಗಿರುವ ತಡೆ ಬೇಲಿ ಇದೀಗ ವಾಹನ ಸವಾರರಿಗೆ ಕಿರಿಕಿರಿಯನ್ನು ತಂದೊಡ್ಡಿದೆ. ನಗರದ ಹಲವಾರು ಕಡೆಗಳಲ್ಲಿ ತಡೆ ಬೇಲಿ ತುಂಡಾಗಿ ಕೆಳಭಾಗದಲ್ಲಿ ಅವಶೇಷಗಳು ಮಾತ್ರ ಬಾಕಿ ಆಗಿರುವ ಪರಿಸ್ಥಿತಿ ಬಂದಿದ್ದು ಅವಾಂತರಗಳಿಗೆ ಕಾರಣವಾಗುತ್ತಿದೆ.

Advertisement

ತಡೆಬೇಲಿ ಹೋಗಿರುವ ಭಾಗದಲ್ಲಿ ವಾಹನ ಸವಾರರು ತಮ್ಮ ವಾಹನಗಳನ್ನು ಪಾರ್ಕ್‌ ಮಾಡುವ ಸಂದರ್ಭ ತಡೆಬೇಲಿ ಅವಶೇಷಗಳ ಮೊನಚಾದ ಭಾಗದ ಮೇಲೆ ವಾಹನದ ಚಕ್ರ ಚಲಿಸಿದಾಗ ಅದು ಚುಚ್ಚಿ ಟಯರ್‌ ಪಂಕ್ಚರ್‌ ಆಗುತ್ತಿರುವ ಘಟನೆ ಸಂಭವಿಸುತ್ತಿದೆ.

ಸೋಮವಾರ ಬೆಳಿಗ್ಗೆ ಗಾಂಧಿನಗರ ಮಸೀದಿ ಬಳಿ ಇದೇ ರೀತಿಯಿಂದಾಗಿ ಕಾರಿನ ಚಾಲಕರೋರ್ವರು ಸಮಸ್ಯೆ ಎದುರಿಸಬೇಕಾಯಿತು. ಸಂಬಂಧ ಪಟ್ಟವರು ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಎಲ್ಲೆಡೆ ಆಗ್ರಹ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next