Advertisement

ಹಾಡಹಗಲೇ ಆನೆ ಪ್ರತ್ಯಕ್ಷ

07:35 AM Jul 22, 2017 | |

ಸುಳ್ಯ: ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರುನಲ್ಲಿ  ಹಾಡಹಗಲೇ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು ಮಸೀದಿಗೆ ತೆರಳಿ ಹಿಂದಿರುಗುತ್ತಿದ್ದ ಮಕ್ಕಳು ಗಾಬರಿಗೊಂಡು ದಿಕ್ಕಾಪಾಲಾದ ಘಟನೆ ಶುಕ್ರವಾರ ನಡೆದಿದೆ.

Advertisement

ಮಕ್ಕಳು ಮಸೀದಿಯಲ್ಲಿ ಮಧ್ಯಾಹ್ನದ ಪ್ರಾರ್ಥನೆ ಮುಗಿಸಿ ಹಿಂದಿರುಗು ತ್ತಿದ್ದರು. ಈ ವೇಳೆ ಕೋಲ್ಚಾರಿನ ಮುಡಂಗೋಳಿ ಸಮೀಪ ಕಾಡಿನಿಂದಿಳಿಯುತ್ತಿದ್ದ ಆನೆಯೊಂದು ಕಾಣಿಸಿಕೊಂಡಿತು. ಗಾಬರಿಗೊಂಡ ಮಕ್ಕಳು ದಿಕ್ಕಾಪಾಲಾಗಿ ಓಡತೊಡಗಿದರೆನ್ನಲಾಗಿದೆ. ಬಳಿಕ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಊರವರು ಆನೆಯನ್ನು ಕಾಡಿಗಟ್ಟಿದ್ದರು ಎಂದು ತಿಳಿದುಬಂದಿದೆ.

ಕೆಲವು ದಿನಗಳಿಂದ ಆನೆ ಹಿಂಡೊಂದು ಕೋಲ್ಚಾರು ಭಾಗದ ಪೈಂಬೆಚ್ಚಾಲ್‌, ಮಾಣಿಮರ್ದು, ಕೊçಂಗಾಜೆ ಮೊದಲಾದ ಪರಿಸರದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಕೃಷಿ ತೋಟಕ್ಕೆ ದಾಳಿಯಿಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next