Advertisement

Sullia; ಸೋಣಂಗೇರಿ: ಬೈಕ್‌ಗೆ ಕಾರು ಢಿಕ್ಕಿ; ಎಎಸ್‌ಐಗೆ ಗಾಯ

12:29 AM Feb 12, 2024 | Team Udayavani |

ಸುಳ್ಯ: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಕಡಬ ಠಾಣಾ ಎಎಸ್‌ಐ ಗಾಯಗೊಂಡ ಘಟನೆ ಫೆ. 10ರಂದು ಸೋಣಂಗೇರಿಯಲ್ಲಿ ಸಂಭವಿಸಿದೆ.

Advertisement

ಸುಳ್ಯ ಕಡೆಗೆ ಬರುತ್ತಿದ್ದ ಮಾರುತಿ ರಿಟ್ಜ್ ಕಾರಿನ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಎಎಸ್‌ಐ ಚಂದ್ರಶೇಖರ್‌ ಅವರ ಬಲ ಕಾಲಿಗೆ ಗಾಯವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next