Advertisement

Sullia ಜಾಲ್ಸೂರು: ಪತ್ನಿಗೆ ಚೂರಿಯಿಂದ ಹಲ್ಲೆ

12:36 AM Jul 01, 2024 | Team Udayavani |

ಸುಳ್ಯ: ವ್ಯಕ್ತಿಯೊಬ್ಬ ಚೂರಿಯಿಂದ ಪತ್ನಿಗೆ ಹಲ್ಲೆ ನಡೆಸಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಜಾಲ್ಸೂರು ಗ್ರಾಮದ 25 ವರ್ಷದ ಮಹಿಳೆಯನ್ನು 6 ವರ್ಷ ಗಳ ಹಿಂದೆ ನವೀನ್‌ ಕುಮಾರ್‌ಗೆ ವಿವಾಹ ಮಾಡಿ ಕೊಡಲಾಗಿದ್ದು, ಆ ಬಳಿಕ ಪತ್ನಿಗೆ ಪತಿಯು ಕಾರಣ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ಪತ್ನಿಯು ವಿನೋಭನಗರದಲ್ಲಿರುವ ತವರು ಮನೆಯಲ್ಲಿ ವಾಸವಿದ್ದಾರೆ. ಜೂ.28ರಂದು ರಾತ್ರಿ ಅಲ್ಲಿಗೆ ಹೋಗಿದ್ದ ನವೀನ್‌ ಕುಮಾರ್‌ ಪತ್ನಿಗೆ ಚೂರಿಯಿಂದ ಹಲ್ಲೆ ನಡೆಸಿದ್ದು, ಮಹಿಳೆಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next