Advertisement

Sullia: ಹೊಟೇಲ್‌ ಕಾರ್ಮಿಕ ಹೃದಯಾಘಾತದಿಂದ ಸಾವು

12:06 AM Sep 05, 2023 | Team Udayavani |

ಸುಳ್ಯ: ಸುಳ್ಯ ರಥಬೀದಿಯ ಹೊಟೇಲೋಂದರಲ್ಲಿ ಕ್ಲೀನಿಂಗ್‌ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಲೂಲು (48) ಸೆ. 3ರಂದು ಹೃದಯಾಘಾತದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಎರಡೂವರೆ ವರ್ಷಗಳಿಂದ ಲೂಲು ಇಲ್ಲಿನ ಹೊಟೇಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ರವಿವಾರ ಅವರು ರೂಮಿನಲ್ಲಿ ಮಲಗಿದ್ದ ಸಂದರ್ಭ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಅವರ ಮನೆಯವರು, ಸಂಬಂಧಿಕರ ಮಾಹಿತಿ ತಿಳಿಯದ ಹಿನ್ನೆಲೆಯಲ್ಲಿ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next