ಸುಳ್ಯ: ಆಧುನಿಕ ಸುಳ್ಯದನಿರ್ಮಾತೃ ಡಾ| ಕುರುಂಜಿ ವೆಂಕಟ್ರಮಣ ಗೌಡ ಅವರ 89ನೇ ಜಯಂತ್ಯುತ್ಸವ ಪ್ರಯುಕ್ತ ಜರಗುವ ಕೆವಿಜಿ ಸುಳ್ಯ ಹಬ್ಬ ರವಿವಾರ ಆರಂಭಗೊಂಡಿದೆ. ಆ ಪ್ರಯುಕ್ತ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಅವರು ಪೊರಕೆ ಹಿಡಿದು ಗುಡಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಶಿಕ್ಷಣ ಸಂಸ್ಥೆ ಮತ್ತು ನ.ಪಂ.ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸುಳ್ಯದ ನಗರದ ಪ್ರಮುಖ ಬೀದಿಗಳಲ್ಲಿ ದಿನವಿಡೀ ಸ್ವಚ್ಛತಾ ಆಂದೋಲನ ನೆರವೇರಿತು.
ನಗರ ಸ್ವಚ್ಛತೆಗೆ ಆದ್ಯತೆ ನೀಡಿ
ಉದ್ಘಾಟನೆ ನೆರವೇರಿಸಿದ ಶೀಲಾವತಿ ಮಾಧವ ಅವರು, ಪ್ರತಿಯೋರ್ವರ ಮನಸ್ಸಿನಲ್ಲೂ ಸ್ವಚ್ಛತೆ ಮೂಡಿದಾಗ ಪರಿಸರ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತದೆ. ನಗರವನ್ನು ಸ್ವಚ್ಛವಾಗಿರಿಸಿಕೊಳ್ಳಲು ಸರ್ವರುಸ್ವಚ್ಛತೆ ಬಗ್ಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅವರು ಮಾರ್ಗದರ್ಶನ ನೀಡಿ ಸ್ವಚ್ಛತೆ ಪ್ರತಿಯೊಬ್ಬನ ಜವಾಬ್ದಾರಿ. ಸ್ವಚ್ಛತೆ ಇರುವಲ್ಲಿ ಆರೋಗ್ಯವೂ ಇರುತ್ತದೆ. ಇಂದು ಜನಾಂದೋಲನ ಎಲ್ಲೆಡೆ ರೂಪುಗೊಂಡಿದೆ ಎಂದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ನಿರ್ದೇಶಕ ಅಕ್ಷಯ್ ಕುರುಂಜಿ, ಪಡ್ಡಂಬೈಲು ವೆಂಕಟ್ರಮಣ ಗೌಡ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ, ಸುಳ್ಯ ಹಬ್ಬ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್. ಗಂಗಾಧರ್, ಸಂಚಾಲಕ ಸಂತೋಷ್ ಮಡ್ತಿಲ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಿರ್ಲಾಯ, ದಿನೇಶ್ ಅಂಬೆಕಲ್ಲು, ಡಾ| ಲೀಲಾಧರ್ ಡಿ. ವಿ., ಡಾ| ಎನ್.ಎಸ್. ಶೆಟ್ಟರ್, ಕಮಲಾಕ್ಷಿ ಟೀಚರ್, ಎನ್. ಜಯಪ್ರಕಾಶ್ ರೈ, ಪಿ.ಎ. ಮಹಮ್ಮದ್, ದಿನೇಶ್ ಮಡಪ್ಪಾಡಿ, ದೊಡ್ಡಣ್ಣ ಬರೆಮೇಲು, ಜಗದೀಶ್ ಅಡ್ತಲೆ, ರೋಟರಿ ಅಧ್ಯಕ್ಷ ಜಿತೇಂದ್ರ ಎನ್.ಎ., ಸಂಜೀವ
ಕುದ್ಪಾಜೆ, ಚಿತ್ರಕಲಾ ಕೆ.ಎಸ್., ಧನಂಜಯ ಮದುವೆಗದ್ದೆ , ರಜತ್ ಅಡ್ಕಾರ್, ಗಿರೀಶ್, ಡಿ.ಟಿ. ದಯಾನಂದ, ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ರಾವ್, ಸತೀಶ್ ಕೆ.ಜಿ., ಜವರೇ ಗೌಡ, ಎನ್‌ಎ. ರಾಮಚಂದ್ರ, ಡಾ| ಪುರುಷೋತ್ತಮ, ಮಮತಾ, ಅಬ್ಟಾಸ್ ಹಾಜಿ ಕಟ್ಟೆಕಾರ್ ಮತ್ತಿತರಿದ್ದರು. ಸಂಸ್ಥೆಯ ವಿವಿಧ ಘಟಕಗಳ ವಿದ್ಯಾರ್ಥಿಗಳು ಸ್ವಚ್ಛತೆಯಲ್ಲಿ
ಪಾಲ್ಗೊಂಡರು.