Advertisement
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ದಿನೇಶ ಅಂಬೆಕಲ್ಲು, ದೇವಪ್ಪ ನಾಯ್ಕ ಹೊನ್ನೆಡಿ ಶುಭ ಹಾರೈಸಿದರು. ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಗೀತಾ ಕೋಲ್ಚಾರು, ಸತ್ಯಕುಮಾರ್ ಅಡಿಂಜ, ಭೋಜಪ್ಪ ನಾಯ್ಕ ಅಡ್ಕಾರು, ರವಿಚಂದ್ರ ಕೋನಡ್ಕಪದವು, ಉದಯ ಕುಮಾರ ಕುಕ್ಕುಡೆಲು, ಧರ್ಮಣ್ಣ ನಾಯ್ಕ ಗರಡಿ, ಸೀತಾರಾಮ ಕಣಪಿಲ, ಚೆನ್ನಕೇಶವ ಕಣಪಿಲ, ಧನಂಜಯ ಕಲ್ಮಡ್ಕ, ಪುರುಷೋತ್ತಮ ಬಿ., ಶುಭಕರ ನಾಯ್ಕ, ಬಾಲಕೃಷ್ಣ ಭಟ್, ಗಂಗಾಧರ ಮೇನಾಲ, ಸೋಮಪ್ಪ ನಾಯ್ಕ, ಆದಿತ್ಯ, ದೀಕ್ಷಿತ್ ನಾಯ್ಕ, ಪುಷ್ಪಾವತಿ, ಲಕ್ಷ್ಮೀಶ ಪಾಟಾಳಿ, ಜಗನ್ನಾಥ ನಾಯ್ಕ, ಹರಿಪ್ರಸಾದ್ ಅಡ್ಕಾರು, ಅಶೋಕ ಮೂಲೆ ಬಡ್ಡಡ್ಕ, ಜೂಲಿಯನಾ ಕ್ರಾಸ್ತಾ, ಶಾಫಿ ಕುಟ್ಟಮೊಟ್ಟೆ, ಶಿವಕುಮಾರ ಕೌಡಿಚ್ಚಾರು, ಇಬ್ರಾಹಿಂ ಉಪಸ್ಥಿತರಿದ್ದರು. ಎಸ್.ಟಿ. ಘಟಕದ ಪದಾಕಾರಿಗಳನ್ನು ನೇಮಕ ಮಾಡಲಾಯಿತು. ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿದರು. ರವಿಚಂದ್ರ ಪದವು ವಂದಿಸಿದರು.
ಕಾಶ್ಮಿರದ ಕಥುವಾ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರ ಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಟೀಕಿಸಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಬಿಜೆಪಿ ಜನಪ್ರತಿನಿಧಿಗಳು ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಗುರುವಾರ ನಡೆದ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ಯನ್ನು ಉದ್ದೇಶಿಸಿ ಅವರು ಮಾತನಾಡಿದರು.