Advertisement

ಸುಖೋಯ್‌ಗೆ ಹೊಸ ಕ್ಷಿಪಣಿ?

11:45 PM May 28, 2019 | sudhir |

ಹೊಸದಿಲ್ಲಿ: ಭಾರತೀಯ ವಾಯು ಪಡೆಯ (ಐಎಎಫ್) ಯುದ್ಧ ವಿಮಾನಗಳಲ್ಲಿ ಪ್ರಮುಖವಾಗಿರುವ “ಸುಖೋಯ್‌-30′ ಮಾದರಿಯ ವಿಮಾನಗಳಿಗೆ ಮುಂದಿನ ಎರಡು ವರ್ಷಗಳಲ್ಲಿ ಇಸ್ರೇಲ್‌ ನಿರ್ಮಿತ ಐ-ಡೆರ್ಬಿ ಏರ್‌-ಟು-ಏರ್‌ ಕ್ಷಿಪಣಿ ಉಡಾವಣಾ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ ಎಂದು ಐಎಎಫ್ ತಿಳಿಸಿದೆ. ಸದ್ಯಕ್ಕೆ “ಸುಖೋಯ್‌-30′ ವಿಮಾನಗಳಲ್ಲಿ ರಷ್ಯಾ ನಿರ್ಮಿತ “ಆರ್‌-77′ ಮಾದರಿಯ ಕ್ಷಿಪಣಿಗಳನ್ನು ಬಳಸಲಾಗುತ್ತಿದ್ದು, ಇವು ಅತ್ಯಾಧುನಿಕ ವಾಯು ದಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿಯಾಗಿಲ್ಲ ಹಾಗೂ ಅವುಗಳ ಕ್ಷಮತೆ ತೀರಾ ಸೀಮಿತವಾಗಿರುವುದರಿಂದ ಅವುಗಳನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ ಎಂದು ಐಎಎಫ್ ಹೇಳಿದೆ.

Advertisement

ಬಾಲಾಕೋಟ್‌ ದಾಳಿಯ ಅನಂತರ ಫೆ. 27ರಂದು ಭಾರತದ ಮೇಲೆ ದಾಳಿ ನಡೆಸಲು ಆಗಮಿಸಿದ್ದ ಪಾಕಿಸ್ಥಾನ ವಾಯುಪಡೆಯ ಯುದ್ಧ ವಿಮಾನಗಳು, ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದು ಭಾರತೀಯ ಸೇನಾ ನೆಲೆಯಿರುವ ರಜೌರಿ ಸೆಕ್ಟರ್‌ನಲ್ಲಿ ಕೆಲವು ಕ್ಷಿಪಣಿಗಳನ್ನು ಪ್ರಯೋಗಿಸಿದ್ದವು. ಅವುಗಳನ್ನು ಹಿಮ್ಮೆಟ್ಟಿಸಲು ಐಎಎಫ್, “ಸುಖೋಯ್‌-30′ ಎಂಕೆಐ ಜೆಟ್‌ಗಳೂ ಸೇರಿದಂತೆ 8 ಯುದ್ಧ ವಿಮಾನಗಳನ್ನು ಆಗಸಕ್ಕೆ ಹಾರಿಸಿತ್ತು. ಆದರೆ, ಪಾಕಿಸ್ಥಾನ ಪ್ರಯೋಗಿಸಿದ, ಅಮೆರಿಕ ನಿರ್ಮಿತ “ಅಡ್ವಾನ್ಸ್‌$x ಮೀಡಿಯಂ ರೇಂಜ್‌ ಏರ್‌-ಟು-ಏರ್‌’ ಕ್ಷಿಪಣಿ (ಎಎಂಆರ್‌ಎಎಎಂ) ಗಳ ಮುಂದೆ ರಷ್ಯಾ ನಿರ್ಮಿತ ಆರ್‌-77 ಮಾದರಿಯ ಕ್ಷಿಪಣಿಗಳು, ತಾಂತ್ರಿಕವಾಗಿ ತೀರಾ ದುರ್ಬಲ ಎನಿಸಿದವು. ಹಾಗಾಗಿ, ಇಸ್ರೇಲ್‌ ನಿರ್ಮಿತ ಐ-ಡೆರ್ಬಿ ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ ಎಂದು ಐಎಎಫ್ನ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next