Advertisement

ಯೋಗ ನಿರೋಗ : ಸುಖಾಸನ

03:36 PM Jan 19, 2021 | Team Udayavani |

ನಾನು ಒಮ್ಮೆ ಕೂಡಾ ಯೋಗಾಸನ ಮಾಡಿಲ್ಲ ಅನ್ನುವವರು ಕೂಡ ದಿನವೂ ಒಮ್ಮೆಯಾದರೂ ಮಾಡುವಂಥ ಆಸನವೇ- ಸುಖಾಸನ. ನಾವೆಲ್ಲರೂ ನೆಲದ ಮೇಲೆ ಊಟಕ್ಕೆ ಕೂರುತ್ತೇವಲ್ಲ, ಅದೇ ಸುಖಾಸನದ ಭಂಗಿ. ಹೀಗೆ ಕುಳಿತಾಗ ಮನಸ್ಸಿಗೆ ಒಂದು ರೀತಿಯ ಸಮಾಧಾನ ಆಗುತ್ತದೆ. ಹಾಗಾಗಿಯೇ ಈ ಆಸನಕ್ಕೆ ಸುಖಾಸನ ಎಂದು ಹೆಸರು ಬಂದಿದೆ. ಸಂಸ್ಕೃತದಲ್ಲಿ ಸುಖಮ್‌ ಎಂದರೆ ಆರಾಮ, ಸುಲಭ, ಸಂತೋಷದಾಯಕ ಇತ್ಯಾದಿ ಅರ್ಥವಿದೆ. ಸುಖಾಸನ ಮಾಡಲು ಕುಳಿತಾಗ ಮೊಣಕಾಲಿನ ಭಾಗವು,
ಎಳೆತಕ್ಕೆ ಒಳಗಾಗುತ್ತದೆ. ಎಲ್ಲಾ ವಯೋಮಾನದವರೂ ಈ ಆಸನ ಮಾಡಬಹುದು.

Advertisement

ಅಭ್ಯಾಸಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಬೆನ್ನು, ಕುತ್ತಿಗೆ ನೇರಮಾಡಿ ದಂಡಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ
ಬಲಗಾಲನ್ನು ಮಡಚಬೇಕು. ಎಡಗಾಲನ್ನು ಎಡಬದಿಗೆ ಮಡಚಬೇಕು ಕೈಗಳಲ್ಲಿ ಚಿನ್ಮುದ್ರೆ ಮಾಡಿ ಬೆನ್ನು- ಕುತ್ತಿಗೆಯನ್ನು ನೇರಮಾಡಿ ಕುಳಿತುಕೊಳ್ಳಬೇಕು. ಸ್ವಲ್ಪ ಹೊತ್ತು ನಿರಾಳವಾಗಿ ಉಸಿರಾಡಿ ನಂತರ ವಿರಮಿಸಬೇಕು. ಅನಂತರ ವಿಶ್ರಾಂತಿ ಪಡೆಯಬೇಕು.

ಪ್ರಯೋಜನಗಳು:
ಸುಖಾಸನ ಮಾಡುವುದರಿಂದ ಕಾಲಿನ ನರಗಳ ಸೆಳೆತ ನಿವಾರಣೆ ಯಾ ಗುತ್ತದೆ. ಮೊಣಕಾಲುಗಳು ಬಲಗೊಳ್ಳುತ್ತವೆ. ಬೆನ್ನು ಮೂಳೆ ಗಟ್ಟಿಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next