Advertisement

ಪಿಎಂಒ, ಜಡ್ಜ್ ಹೆಸರಲ್ಲೂ ವಂಚಕ ದಂಪತಿ ಕರಾಮತ್ತು

12:16 AM Sep 24, 2021 | Team Udayavani |

ಕೊಚ್ಚಿ: ತಿಹಾರ್‌ ಜೈಲಲ್ಲಿದ್ದುಕೊಂಡೇ 200 ಕೋಟಿ ರೂ.ಹಗರಣ ನಡೆಸಿದ ವಂಚಕ ಸುಕೇಶ್‌ ಚಂದ್ರಶೇಖರ್‌ ಮತ್ತು ಆತನ ಪತ್ನಿ ಲೀನಾ ಮರಿಯಾ ಅವರು ಕೇಂದ್ರ ಗೃಹ ಸಚಿವಾಲಯ, ಪ್ರಧಾನಿ ಕಾರ್ಯಾಲಯ ಹಾಗೂ ಸುಪ್ರೀಂ ಕೋರ್ಟ್‌ ಜಡ್ಜ್  ಯೊಬ್ಬರ ದೂರವಾಣಿ ಸಂಖ್ಯೆಯನ್ನೇ ನಕಲು ಮಾಡಿ ಹಲವರನ್ನು ವಂಚಿಸುತ್ತಿದ್ದ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

Advertisement

ಕೇಂದ್ರ ತನಿಖಾ ಸಂಸ್ಥೆ ಸಿಬಿಐ ವರದಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಪ್ರಧಾನ ಮಂತ್ರಿಗಳ ಕಚೇರಿ, ಕೇಂದ್ರ ಗೃಹ ಸಚಿವಾ ಲಯ, ಸುಪ್ರೀಂ ಕೋರ್ಟ್‌ನ ನ್ಯಾಯ ಮೂರ್ತಿಯೊಬ್ಬರ ದೂರವಾಣಿ ಸಂಖ್ಯೆಯನ್ನು ನಕಲು (ಸ್ಪೂಫ್) ಮಾಡಿ, ವಿವಿಧ ಪ್ರಕರಣಗಳಲ್ಲಿ ಸಿಲುಕಿರುವ ಶ್ರೀಮಂತರಿಗೆ ಕರೆ ಮಾಡುತ್ತಿದ್ದರು. ಅನಂತರ ತಮಗಿರುವ ಪ್ರಭಾವ ಬೆಳೆಸಿ ನಿಮ್ಮನ್ನು ಕೇಸಿನಿಂದ ಪಾರು ಮಾಡುವುದಾಗಿ ಹೇಳಿ ನಂಬಿಸುತ್ತಿದ್ದರು.

ಸದ್ಯ ಜೈಲಲ್ಲಿರುವ ಹೈದರಾಬಾದ್‌ನ ಉದ್ಯಮಿ ಸಾಂಬಶಿವ ರಾವ್‌ ಅವರನ್ನು ತನಿಖೆಯಿಂದ ಪಾರು ಮಾಡುತ್ತೇವೆ ಎಂದು ಲೀನಾ ಮರಿಯಾ ನಂಬಿಸಿದ್ದಳು. ತನ್ನನ್ನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ನಂಬಿಸಿದ್ದ ಸುಕೇಶ್‌ ಚಂದ್ರಶೇಖರ್‌, ಉದ್ಯಮಿಯಿಂದ 3 ಕೋಟಿ ರೂ. ವಸೂಲು ಮಾಡಿದ್ದ. ಸಂಶಯಗೊಂಡ ರಾವ್‌ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾಗ ಸಿಬಿಐ ಹೆಸರಿನಲ್ಲಿ ವಂಚಿಸಿದ್ದು ದೃಢವಾ ಯಿತು. ಆತ ವಿಶೇಷ ಆ್ಯಪ್‌ಗ್ಳ ಮೂಲಕ ಪ್ರಮುಖರಿಗೆ ಕರೆಗಳನ್ನು ಮಾಡಿದ್ದಾನೆ .

Advertisement

Udayavani is now on Telegram. Click here to join our channel and stay updated with the latest news.

Next