Advertisement

ಮತ್ತೊಂದು ಕೇಸಲ್ಲಿ ವಂಚಕ ಸುಕೇಶ್‌ ಚಂದ್ರಶೇಖರ್‌ ಸೆರೆ 

06:23 PM Feb 16, 2023 | Team Udayavani |

ನವದೆಹಲಿ:  ವಂಚನೆ ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿ ಇರುವ ವಂಚಕ ಸುಕೇಶ್‌ ಚಂದ್ರಶೇಖರ್‌ನನ್ನು ಇ.ಡಿ. ಮತ್ತೂಂದು ಪ್ರಕರಣದಲ್ಲಿ ಬಂಧಿಸಿದೆ.

Advertisement

ರೆಲಿಗೇರ್‌ ಕಂಪನಿ ಮಾಜಿ ಅಧಿಕಾರಿ ಮಲ್ವಿಂದರ್‌ ಸಿಂಗ್‌ರ ಪತ್ನಿಗೆ ಆತ ವಂಚಿಸಿದ್ದಾನೆ ಎನ್ನುವುದೇ ಹೊಸ ಆರೋಪ.

ರೆಲಿಗೇರ್‌ ಫಿನ್ವೆಸ್ಟ್‌ ಲಿ.ನ ಮಾಜಿ ಅಧಿಕಾರಿ ಮಲ್ವಿಂದರ್‌ ಸಿಂಗ್‌, ತಮ್ಮ ಸಂಸ್ಥೆಯ ಹಣವನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿದ್ದಾರೆ. ಅವರಿಗೆ ಜಾಮೀನು ಸಿಗುವಂತೆ ಮಾಡುವುದಾಗಿ ಹೇಳಿ ಅವರ ಪತ್ನಿ ಜಪ್ನಾ ಅವರಿಂದ ಸುಕೇಶ್‌ 3.5 ಕೋ.ರೂ. ಪಡೆದಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಇದೇ ವೇಳೆ, ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ದೆಹಲಿಯ ಕೋರ್ಟ್‌ ಆತನನ್ನು 9 ದಿನಗಳ ಕಾಲ ಇ.ಡಿ. ವಶಕ್ಕೆ ಒಪ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next