Advertisement

ವಿದ್ಯಾರ್ಥಿಗಳಲ್ಲಿನ ಆತ್ಮಹತ್ಯೆಪ್ರವೃತ್ತಿ ಮತ್ತು ಶೈಕ್ಷಣಿಕ ವ್ಯವಸ್ಥೆ

03:42 PM Jun 01, 2018 | |

ಒಂದು ಉತ್ತಮ ಬಲಿಷ್ಠ ಸಮಾಜ ನಿರ್ಮಾಣ ಮಾಡುವಲ್ಲಿ ಶೈಕ್ಷಣಿಕ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ತುಂಬಾನೇ ಮಹತ್ವ ಪೂರ್ಣವಾದುದು ಹಾಗೂ ಇಂತಹ ಮಹತ್ವ ಪೂರ್ಣವಾದ ವಿಷಯಗಳು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೂ ಸಹಕಾರಿ.
ಆದರೆ ಇನ್ನು ಸುಂದರ ಬದುಕನ್ನು ಕಾಣಲು ಹೆಣಗಾಡುವ ಕೆಲವು ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಪ್ರಬುದ್ಧ ನಾಗರಿಕ ಸಮಾಜವು ತಲೆ ತಗ್ಗಿಸುವಂತಹ ಕಳವಳಕಾರಿ ವಿಷಯವಾಗಿದೆ.

Advertisement

ಒಂದು ಅಧ್ಯಯನದ ಪ್ರಕಾರ ವ್ಯತಿರಿಕ್ತ ನಡತೆ ವಿಷಯಗಳು, ಆತ್ಮಹತ್ಯೆಯಂತಹ ಪ್ರವೃತ್ತಿ, ಮಾನಸಿಕ ಸಮಸ್ಯೆಗಳು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಲಿದ್ದು, 4 ರಿಂದ 16 ವರ್ಷಗಳ ನಡುವಿನ ಶೇಕಡಾ 12 ಭಾರತೀಯ ವಿದ್ಯಾರ್ಥಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ, ಶೇಕಡಾ 20 ಮಂದಿಯಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣ ಗೋಚರಿಸುತ್ತ ಲಿದ್ದು, ಇದರಲ್ಲಿ 2 5 ಶೇಕಡಾ ಮಂದಿ ಖೇದವಿಕಲ್ಪ ಅಸ್ವಸ್ಥತೆ ಅಥವಾ ಬೈ ಪೋಲಾರ್ ನಿಂದ ಬಳಲುತ್ತಿದ್ದಾನೆ ಎಂಬುವುದಾಗಿ ತಿಳಿದು ಬಂದಿದೆ.

ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿರುವ ಇಂತಹ ನಕಾರಾತ್ಮಕ ವಿಷಯಗಳ ಕಡೆಗೆ ಶೈಕ್ಷಣಿಕ ವ್ಯವಸ್ಥೆ ಮಾತ್ರವಲ್ಲದೆ, ಇಡೀ ಸಮಾಜವೇ ಗಂಭೀರ ಚಿಂತನೆಗಳನ್ನು ಹರಿಸಿ ದಿಟ್ಟ ಹೆಜ್ಜೆಯನ್ನಿರಿಸಬೇಕಾಗಿರುವುದು ಅಷ್ಟೇ ಮಹತ್ವಪೂರ್ಣವಾಗಿದೆ.

ಪರಿಣಾಮ ಬೀರುವ ಅಂಶಗಳು:
ಎಳೆಯರಲ್ಲಿ ಕಾಣಬರುವ ಕೀಳರಿಮೆ, ಆತಂಕ, ವಿಚ್ಛಿದ್ರಕಾರಕ ನಡತೆ, ಭೌದ್ಧಿಕ ಅಸಮರ್ಥತೆ ಇವುಗಳು ಅವರ ಮೇಲೆ ಗಂಭೀರವಾಗಿ ಪರಿಣಾಮವನ್ನುಂಟು ಮಾಡಿ, ಅವರ ಸರ್ವತೋಮುಖ ಬೆಳವಣಿಗೆಗೆ ತೊಡಕಾಗಿ ಪರಿಣಾಮಿಸುವುದು.

ಇವುಗಳಲ್ಲದೆ ಜನಾಂಗೀಯ, ಲೈಂಗಿಕ, ಧಾರ್ಮಿಕ ತಾರತಮ್ಯ, ದೈಹಿಕ ಅವಹೇಳನ, ಭಾವನಾತ್ಮಕ ವಿಷಯಗಳು, ಅಲ್ಪ ಆತ್ಮ ಗೌರವ ಮತ್ತು ಅಭದ್ರತೆ, ಕೌಟುಂಬಿಕ ಮತ್ತು ಆರ್ಥಿಕ ಸಮಸ್ಯೆ, ಮಾದಕ ವ್ಯಸನ ಮತ್ತು ಸಾಮರಸ್ಯದ ಸವಾಲುಗಳೂ ಕೂಡ ಎಳೆಯರಲ್ಲಿ ಮಾನಸಿಕ ಸಮಸ್ಯೆಗೆ ಕಾರಣವಾಗಲೂ ಬಹುದು. ಪರೀಕ್ಷೆಯಲ್ಲಿ ಉತ್ತಮವಾಗಿ ಮಾಡಲೇಬೇಕೆಂಬ ಹೆತ್ತವರ ಅತ್ಯಧಿಕ ಒತ್ತಡವು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಬಲವಾಗಿ ಘಾಸಿ ಮಾಡಬಹುದು. ಇದರಿಂದ ಏಕಾಗ್ರತೆ ಸಾಧಿಸಲು ಕಷ್ಟವಾಗಬಹುದು.
ಕಡಿಮೆ ಶೈಕ್ಷಣಿಕ ಪ್ರದರ್ಶನ, ಗೆಳೆಯರು ಮತ್ತು ಶಿಕ್ಷಕರೊಂದಿಗೆ ಸಾಮಾಜಿಕ ವಿಷಯಗಳ ಚರ್ಚೆಯ ಕೊರತೆಯೂ ಮಾನಸಿಕ ಸಮಸ್ಯೆಯನ್ನು ತಂದೊಡಬಲ್ಲದು.

Advertisement

ಪರಿಹಾರ: 
ಇಂತಹ ಸಮಸ್ಯೆಯ ನಿರ್ಮೂಲನೆಗೆ ವಿದ್ಯಾರ್ಥಿ, ಶಿಕ್ಷಕರು ಮತ್ತು ಹೆತ್ತವರ ಪಾತ್ರವೂ ತುಂಬಾನೇ ಮಹತ್ವ ಪೂರ್ಣವಾಗಿದೆ. ಮುಖ್ಯವಾಗಿ ಹೆತ್ತವರು ವಿದ್ಯಾರ್ಥಿಗಳ ಶೈಕ್ಷಣಿಕ ವಿಷಯಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ, ವಿನಾಃ ಅವರ ಭಾವನಾತ್ಮಕ, ಮಾನಸಿಕ ವಿಷಯಗಳಿಗೆ ನೀಡುತ್ತಿಲ್ಲ. ಪೋಷಕರು ಮಕ್ಕಳ ಸಕರಾತ್ಮಕ ಬೆಳವಣಿಗೆಯ ಎಲ್ಲಾ ಅಂಶದ ಕಡೆಗೆ ಸಮಾನಾದ ಬೆಳಕು ಚೆಲ್ಲಬೇಕು. ಮಕ್ಕಳಲ್ಲಿ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಆರಂಭದಲ್ಲಿ ಅದನ್ನು ಗುರುತಿಸಿ ಸೂಕ್ತವಾದ ಚಿಕಿತ್ಸೆ ನೀಡುವ ಕೆಲಸ ಮಾಡಬೇಕು.

ಇನ್ನು ಶಿಕ್ಷಕರ ಪಾತ್ರದ ಬಗ್ಗೆ ಹೇಳುವುದಾದರೆ ಮಕ್ಕಳನ್ನು ಬೈಯುವ, ಹೊಡೆಯುವ ಮೊದಲು ಹಾಗೆ ಆಗಲು ಏನು ಕಾರಣವೇನೆಂದು ತಿಳಿದು, ಅದನ್ನು ಸರಿಪಡಿಸುವತ್ತ ಗಮನಹರಿಸಬೇಕು.

ಶೈಕ್ಷಣಿಕ ಸಂಸ್ಥೆಗಳು ಈ ರೀತಿಯ ಮಾನಸಿಕ ಸಮಾಲೋಚನ ಸಮ್ಮೇಳವನ್ನು ಏರ್ಪಡಿಸಿ ಗುಪ್ತವಾಗಿ ವಿದ್ಯಾರ್ಥಿಗಳಿಗೆ ತಮ್ಮ ಸಮಸ್ಯೆಯನ್ನು ಪರಿಹರಿಸುವ ಕಡೆಗೆ ನೆರವಾಗಬೇಕು. ಎಲ್ಲಾ ವಿದ್ಯಾರ್ಥಿಗಳ ನಿರ್ವಹಣಾ ಸಾಮರ್ಥ್ಯವು ವಿಭಿನ್ನವಾಗಿರಬಹುದು. ಆದುದರಿಂದ ಸಮಾಲೋಚನೆ ತುಂಬಾ ಸಾಮ್ಯತೆ ಮತ್ತು ಪ್ರತಿಯೊಬ್ಬನ ಅಗತ್ಯಕ್ಕೆ ತಕ್ಕಂತೆ ಇರಬೇಕು. ಇನ್ನು ವಿದ್ಯಾರ್ಥಿ ತಮಗೇನು ಬೇಕೆಂದು ಹೇಳಿ ಸಹಕರಿಸಿದಲ್ಲಿ ಈ ಕಾರ್ಯವು ಅರ್ಧದಷ್ಟು ಸಲೀಸಾಗುವುದು. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಉತ್ತಮ ಸದೃಢ ಮನೋಧರ್ಮವನ್ನು ಉಂಟು ಮಾಡಲು ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಮನೋಸ್ಥಿತಿ ವಿಚಾರಗಳ ನಡುವೆ ಅಂತರವನ್ನು ಕಡಿಮೆಗೊಳಿಸಿದಾಗ ವಿದ್ಯಾರ್ಥಿಗಳು ಸರ್ವತೋಮುಖವಾಗಿ ಬೆಳವಣಿಗೆಗೊಂಡು, ಅವರು ಮುಂದೆ ಪ್ರಬುದ್ಧ ನಾಗರೀಕರಾಗುವುದರಲ್ಲಿ ಸಂಶಯವಿಲ್ಲ.   

ನವೀನ್, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next