Advertisement

ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಣೆ: ಬ್ಲೂವೇಲ್‌ ಶಂಕೆ

01:01 PM Oct 02, 2017 | |

ಬೆಂಗಳೂರು: ನಗರದ ವಿಂಡ್ಸರ್‌ಮ್ಯಾನರ್‌ ಬ್ರಿಡ್ಜ್ನಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಬಿಹಾರ ಮೂಲದ ಅಜಯ್‌ (28) ಎಂಬಾತನನ್ನು ಭಾನುವಾರ ಮಧ್ಯಾಹ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ರಕ್ಷಿಸಿದ್ದಾರೆ. ರಕ್ಷಣೆಗೊಳಗಾಗಿರುವ ಅಜಯ್‌ನನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ಆತ ಕೈ ಕೊಯ್ದುಕೊಂಡಿರುವ ಕಲೆಗಳನ್ನು ಗಮಿಸಿದರೆ ಬ್ಲೂ ವೇಲ್‌ ಗೇಮ್‌ ಆಟವಾಡಿ, ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. 

Advertisement

ಭಾನುವಾರ ಮಧ್ಯಾಹ್ನ ವಿಂಡ್ಸರ್‌ ಮ್ಯಾನರ್‌ ಬ್ರಿಡ್ಜ್  ಮೇಲೆ ಯುವಕ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಕೆಳಗಿಳಿಯುವಂತೆ ಹೇಳಿದ್ದಾರೆ. ಆದರೆ ಅಜಯ್‌ ಕೇಳಿಲ್ಲ. ಅರ್ಧಗಂಟೆ ನಾನಾ ಕಸರತ್ತು ಮಾಡಿದ ಪೊಲೀಸರು ಕಡೆಗೂ ಆತನನ್ನು ರಕ್ಷಿಸಿದ್ದಾರೆ.

ಮಾನಸಿಕ ಅಸ್ವಸ್ಥನಂತೆ ವರ್ತಿಸುವ ಅಜಯ್‌, ಒಮ್ಮೊಮ್ಮೆ ಹೆಣ್ಣಿನ ಧ್ವನಿಯಲ್ಲಿ ಮಾತನಾಡುತ್ತಿದ್ದ. ಆತನ ಪೋಷಕರು ನೀಡುವ ಮಾಹಿತಿಯಂತೆ 3 ದಿನಗಳಿಂದ ಆತನ ಮೊಬೈಲ್‌ ಸ್ವಿಚ್‌ ಆಫ್ ಆಗಿದೆ. ಈತ ಮೈಸೂನ ಖಾಸಗಿ ಕಾಲೇಜಿನಲ್ಲಿ ಎಂಬಿಎ ಮಾಡುತ್ತಿರುವುದಾಗಿ ಪೋಷಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next