Advertisement

ಚೀತಾಗಳಿಗೆ ಮಿಲ್ಕಾ, ಚೇತಕ್‌, ವಾಯು ಹೆಸರು?

09:38 PM Sep 27, 2022 | Team Udayavani |

ನವದೆಹಲಿ: ಚೀತಾಗಳನ್ನು ಭಾರತಕ್ಕೆ ವಾಪಸ್‌ ತರುವ ಯೋಜನೆಗೆ ಹಾಗೂ ಇತ್ತೀಚೆಗೆ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಾದ ಚೀತಾಗಳಿಗೆ ಹೆಸರನ್ನು ಸೂಚಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಅವರು ಮಾಡಿದ ಮನವಿಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ.

Advertisement

ಸರ್ಕಾರದ ಮೈಗವ್‌ ವೆಬ್‌ಸೈಟ್‌ನಲ್ಲಿ ಚೀತಾಗಳಿಗೆ ಹಲವು ಹೆಸರುಗಳನ್ನು ನಾಗರಿಕರು ಸೂಚಿಸತೊಡಗಿದ್ದಾರೆ.

ಈವರೆಗೆ 750ಕ್ಕೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಮಿಲ್ಕಾ, ಚೇತಕ್‌, ವಾಯು, ಗೌರಿ, ದುರ್ಗಾ, ರುದ್ರ, ಬ್ರಹ್ಮ, ಭೈರವ, ವೀರ್‌, ಭದ್ರ, ಶಕ್ತಿ, ಬ್ರಹಸ್ಪತಿ, ಚಿನ್ಮಯಿ, ರಕ್ಷಾ, ಮೇಧ, ಮಯೂರ ಸೇರಿದಂತೆ ಹಲವು ಹೆಸರುಗಳನ್ನು ಸೂಚಿಸಿದ್ದಾರೆ.

ಅ.26 ಕೊನೆಯ ದಿನವಾಗಿದ್ದು, ಗೆದ್ದವರಿಗೆ ಕುನೋ ಪಾರ್ಕ್‌ಗೆ ಪ್ರವಾಸ ತೆರಳುವ ಅವಕಾಶ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next