Advertisement

ಕಬ್ಬು: ಬೆಲೆ ನಿಗದಿಗೆ ರೈತರ ಒತ್ತಾಯ

01:01 PM Nov 04, 2017 | |

ಇಂಚಗೇರಿ: ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಮಹಾರಾಷ್ಟ್ರದಿಂದ ಸಾಗಿಸುತ್ತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳನ್ನು ಕರ್ನಾಟಕ ರೈತರು ಧೂಳಖೇಡ-ಟಾಕಳಿ ಸೇತುವೆ ಪಕ್ಕದ ಸರಹದ್ದಿನಲ್ಲಿನಲ್ಲಿ ತಡೆದು ಪ್ರತಿಭಟಿಸಿದರು.

Advertisement

ಈ ವೇಳೆ ರೈತ ಮುಖಂಡ ರಾಜಶೇಖರ ಕಲಶೆಟ್ಟಿ ಮಾತನಾಡಿ, ಈ ಭಾಗದ ಸಕ್ಕರೆ ಕಾರ್ಖಾನೆ ಆಡಳಿತ
ಮಂಡಳಿಯವರು ಇಲ್ಲಿವರೆಗೆ ಕಬ್ಬಿನ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ. ಕೂಡಲೆ ಎಲ್ಲ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರು ಪ್ರತಿ ಟನ್‌ ಕಬ್ಬಿಗೆ 3,500 ರೂ. ಬೆಂಬಲ ಬೆಲೆ, ಜೊತೆಯಲ್ಲಿ ಮೊದಲ ಕಂತಿನ ಹಣ 3,000 ರೂ. ರೈತರ ಖಾತೆ ಜಮೆ ಮಾಡುವುದಾಗಿ ಘೋಷಣೆ ಮಾಡಿದರೆ ಮಾತ್ರ ಕಬ್ಬು ಕಾರ್ಖಾನೆಗೆ ಸಾಗಿಸಲು ಬಿಡುತ್ತೇವೆ. ಇಲ್ಲದಿದ್ದರೆ ಉಘ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರೈತ ಮುಖಂಡ ಗೋವರ್ಧನ ಲಾಡ್‌ ಮಾತನಾಡಿ, ಕಳೆದ ಸಾಲಿನಲ್ಲಿ ಸ್ಕಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಕಬ್ಬಿನ ಬಾಕಿ ಉಳಿದ ಹಣ ಕೂಡಲೆ ರೈತರ ಖಾತೆಗೆ ಜಮೆ ಮಾಡುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ರೈತರಾದ ಶರಣಪ್ಪ ಹತ್ತರಸಂಗ, ಗುರುಬಾಳಪ್ಪ ಪಾಟೀಲ, ಸುರೇಶ ಬಗಲಿ, ಸಿದ್ದಾರಾಮ ಬಿರಾದಾರ, ಬಾಳಾಸಾಹೇಬ ಬನಸೋಡೆ, ಪಂಡೀತ ಪಾಟೀಲ, ಬಾಳಾಸಾಹೇಬ ದುವಾಳೆ, ಸಿದ್ದಪ್ಪ ಬಿರಾದಾರ,
ದೊvx‌ಪ್ಪ ಅಣಚಿ, ಚಿದಾನಂದ ಪಾಟೀಲ, ಮಹಾಂತೇಶ ಬಿರಾದಾರ, ರಾಜಕುಮಾರ ಬಿರಾದಾರ ಸೇರಿದಂತೆ
ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next