Advertisement

ಕಬ್ಬಿಗೆ ಬೆಂಕಿ: ಅಪಾರ ಹಾನಿ

05:38 PM Jan 21, 2022 | Shwetha M |

ಆಲಮಟ್ಟಿ: ಅರಳದಿನ್ನಿಯಲ್ಲಿ ಆಕಸ್ಮಿಕ ಬೆಂಕಿಯಿಂದ ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಅಪಾರ ಹಾನಿಯಾಗಿದೆ.

Advertisement

ಗುರುವಾರ ಮಧ್ಯಾಹ್ನ ಕಬ್ಬು ಬೆಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಗ್ರಾಮದ ರೈತರು ಹಾಗೂ ಬಸವನ ಬಾಗೇವಾಡಿಯಿಂದ ಆಗಮಿಸಿದ್ದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರೂ ಪೂರ್ಣ ಪ್ರಮಾಣದಲ್ಲಿ ನಂದಿಸಲು ಸಾಧ್ಯವಾಗಲಿಲ್ಲ. ನಂತರ ಗ್ರಾಮಸ್ಥರ ಸಹಕಾರದಿಂದ ಬೆಂಕಿ ನಂದಿಸಿದರು.

ಬೆಂಕಿಯ ಕೆನ್ನಾಲಿಗೆಯಿಂದ ಕಟಾವಿಗೆ ಬಂದಿದ್ದ ಕಬ್ಬು ಕಣ್ಣ ಮುಂದೆಯೇ ಸುಟ್ಟು ಹೋಗುತ್ತಿರುವುದರಿಂದ ರೈತರ ಆಕ್ರಂದನ ಮುಗಿಲು ಮುಟ್ಟಿತ್ತು. ಕಬ್ಬು ಬೆಳೆಯ ಬದಿಯಲ್ಲಿರುವ ಒಡ್ಡುಗಳಿಗೆ ಹೊಂದಿಕೊಂಡಂತೆ ತೆಂಗು, ಮಾವು, ಚಿಕ್ಕು, ಸಾಗವಾನಿ, ಬೇವಿನಮರಗಳು ಸುಟ್ಟು ಕರಕಲಾಗಿವೆ. ಕಬ್ಬಿಗೆ ನೀರುಣಿಸಲು ಹಾಕಲಾಗಿದ್ದ ಪೈಪ್‌ಗ್ಳು, ನೀರೆತ್ತುವ ಪಂಪ್‌ಸೆಟ್‌ಗಳು, ವಿದ್ಯುತ್‌ ಪರಿವರ್ತಕಗಳು ಸುಟ್ಟಿವೆ. ಇದರಿಂದ ರೈತರಿಗೆ ಅಪಾರ ಹಾನಿಯಾಗಿದೆ.

ಸುಟ್ಟಿರುವ ಕಬ್ಬು ಹನಮಗೌಡ ಪಾಟೀಲ, ದೇವಕ್ಕೆವ್ವ ಮಲ್ಲನಗೌಡ ಪಾಟೀಲ, ಬಾಪುಗೌಡ ಪಾಟೀಲ, ಮಾಧುರಾಯಗೌಡ ಪಾಟೀಲ, ರಾಯನಗೌಡ ಪಾಟೀಲ, ಕರಿಯಪ್ಪ ಬಾವಿಕಟ್ಟಿ, ಯಲಗೂರದಪ್ಪ ಕೊಳ್ಳಾರ, ಮುತ್ತಪ್ಪ ಕೊಳ್ಳಾರ ಎನ್ನುವ ರೈತರಿಗೆ ಸೇರಿರುವುದು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next