Advertisement

ಮುಟ್ಟುಗೋಲು ಹಾಕಿರುವ ಸಕ್ಕರೆ ಶೀಘ್ರ ಹರಾಜು: ಇಕ್ರಮ್‌

02:40 PM Jul 07, 2019 | Suhan S |

ಬನಹಟ್ಟಿ: ರೈತರ ಕಬ್ಬಿನ ಬಿಲ್ ಬಾಕಿಗೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆಯ ಸಕ್ಕರೆ ಮುಟ್ಟುಗೋಲು ಹಾಕಿಕೊಂಡು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅಲ್ಲಿಂದ ಆದೇಶ ಬಂದ ನಂತರ ಕೂಡಲೇ ಹರಾಜು ಕಾರ್ಯ ನಡೆಸಲಾಗುವುದು ಎಂದು ಜಮಖಂಡಿ ಉಪವಿಭಾಗಾಧಿಕಾರಿ ಇಕ್ರಮ್‌ ಹೇಳಿದರು.

Advertisement

ಮುಖಂಡರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳ ಸಕ್ಕರೆ ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ರಾಜ್ಯದಲ್ಲಿಯೇ ಬಾಗಲಕೋಟೆ ಜಿಲ್ಲೆ ಮೊದಲನೆಯದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಲ್ಲೊಳ್ಳಿಯ ವೆಂಕಟೇಶ್ವರ ಏತ ನೀರಾವರಿ ಯೋಜನೆಯ ಸಂದರ್ಭದಲ್ಲಿ ಭೂಮಿ ಕಳೆದುಕೊಂಡು ರೈತರಿಗೆ ಕಾಮಗಾರಿ ಮುಗಿಯುತ್ತ ಬಂದರೂ ಪರಿಹಾರ ಧನ ದೊರೆತಿಲ್ಲ. ಈ ನಿಟ್ಟಿನಲ್ಲಿ ಒಂದು ವಾರದೊಳಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ರೈತರ ಅನ್ಯಾಯವಾಗದಂತೆ ಅವರಿಗೆ ಸಮರ್ಪಕ ಬೆಲೆ ಕೊಡಿಸುವ ಭರವಸೆ ಇಕ್ರಮ್‌ ನೀಡಿದರು. ತಹಶೀಲ್ದಾರ್‌ ಮೆಹಬೂಬಿ, ಪೌರಾಯುಕ್ತ ಆರ್‌.ಎಂ. ಕೊಡುಗೆ, ಗ್ರೇಡ್‌-2 ತಹಶೀಲ್ದಾರ್‌ ಎಸ್‌.ಬಿ. ಕಾಂಬಳೆ, ಕಂದಾಯ ಅಧಿಕಾರಿ ಶ್ರೀಕಾಂತ ಮಾಯನ್ನವರ, ಪಿಎಸ್‌ಐ ಎಸ್‌.ಎಂ. ಅವಜಿ, ಶ್ರೀಕಾಂತ ಗುಳ್ಳನ್ನವರ, ಅಶೋಕ ದೇಸಾಯಿ, ಸುಭಾಸ ಶಿರಗೂರ, ಬಂದು ಪಕಾಲಿ, ಕಲ್ಲಪ್ಪ ಬಿರಾದಾರ, ಶಿವಲಿಂಗ ಟಿರಕಿ, ಹೊನ್ನಪ್ಪ ಬಿರಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next