Advertisement

ರಾಜಕೀಯ ಇಕ್ಕಟ್ಟಿನಲ್ಲಿ ರನ್ನ ಸಕ್ಕರೆ ಕಾರ್ಖಾನೆ

03:18 PM Sep 22, 2021 | Team Udayavani |

ಬಾಗಲಕೋಟೆ: ಜಿಲ್ಲೆಯ ಸಹಕಾರ ವಲಯದ ರನ್ನಸಹಕಾರಿ ಸಕ್ಕರೆ ಕಾರ್ಖಾನೆ ಕಳೆದರೆಡು ವರ್ಷದಿಂದಸ್ಥಗಿತಗೊಂಡಿದೆ. ಇದಕ್ಕೆ ಕಾರಣ ಹಲವು ಇದ್ದರೂರೈತರ ಹಿತ ಕಾಯಲು ಪುನಃ ಆರಂಭಗೊಳ್ಳಬೇಕಿದೆಎಂಬುದು ಹಲವರ ಆಗ್ರಹ. ಆದರೆ ಸಹಕಾರ ತತ್ವದಡಿಆರಂಭಗೊಂಡ ಈ ಕಾರ್ಖಾನೆ ಇದೀಗ ರಾಜಕೀಯಇಕ್ಕಟ್ಟಿನಲ್ಲಿ ಸಿಲುಕಿ, ಬಿಕ್ಕಟ್ಟು ಎದುರಿಸುತ್ತಿದೆ ಎಂಬಮಾತು ಕೇಳಿ ಬರುತ್ತಿದೆ.ಸುಮಾರು 20 ಸಾವಿರಕ್ಕೂ ಹೆಚ್ಚು ರೈತಶೇರುದಾರರನ್ನು ಹೊಂದಿರುವ ಈ ಕಾರ್ಖಾನೆ,ಹಲವು ವರ್ಷಗಳಿಂದ ಕಬ್ಬು ನುರಿಸಿ ರೈತರಒಡನಾಡಿಯಾಗಿದೆ. ಪಕ್ಕದ ವಿಜಯಪುರ ಜಿಲ್ಲೆಯಗಲಗಲಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆಹೋಲಿಸಿದರೆ ಈ ಕಾರ್ಖಾನೆಯಲ್ಲಿ ಆಡಳಿತಮಂಡಳಿ ಒಂದಷ್ಟು ಬಿಗಿಯಾಗಿದ್ದರೆ ಸದ್ಯದ ಪರಿಸ್ಥಿತಿಕಾರ್ಖಾನೆಗೆ ಬರುತ್ತಿರಲಿಲ್ಲವೆಂಬುದು ಹಲವರಅಭಿಮತ.

Advertisement

ಯಾರ ತಲೆಗೆ ಹೊಣೆ ?: ಬೇಕಾದಾಗ ಎಲ್ಲರೂಒಟ್ಟಿಗೆ ಇದ್ದು, ತಮಗೆ ಬೇಕಾದ ರೀತಿ ಕೆಲಸ ಕಾರ್ಯಮಾಡಿಕೊಂಡು ಇದೀಗ ಒಂದಷ್ಟು ಮನಸ್ತಾಪಉಂಟಾದಾಗ ಎಲ್ಲವೂ ಒಬ್ಬರ ಮೇಲೆ ಗೂಬೆ ಗೂರಿಸಿಇನ್ನುಳಿದವರು ಬಚಾವ್‌ ಆಗುತ್ತಿದ್ದಾರೆ ಎಂಬ ಮಾತುಕೇಳಿ ಬರುತ್ತಿವೆ. ಕಾರ್ಖಾನೆಯ ಇಂದಿನ ಸ್ಥಿತಿಗೆಅಧ್ಯಕ್ಷರಾಗಿರುವ ರಾಮಣ್ಣ ತಳೇವಾಡ ಒಬ್ಬರೇಕಾರಣವೇ? ಎಂಬ ಪ್ರಶ್ನೆ ಅವರ ಬೆಂಬಲಿಗರಿಟ್ಟರೆ,ಅತಿಯಾದ ಭ್ರಷ್ಟಾಚಾರ, ಹಣ ದುರ್ಬಳಕೆ ಹಾಗೂಹಿಡಿತವಿಲ್ಲದ ಆಡಳಿತದಿಂದ ಕಾರ್ಖಾನೆ ತೀವ್ರ ಹಾನಿಅನುಭವಿಸಿದೆ. ಇದಕ್ಕೆ ತಳೇವಾಡರೇ ಕಾರಣ ಎಂಬಆರೋಪವನ್ನು ಮತ್ತೂಂದು ಗುಂಪು ಮಾಡುತ್ತಿದೆ.ಸದ್ಯ ಜಿಲ್ಲೆಯಲ್ಲಿ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯವಿಷಯವೇ ದೊಡ್ಡ ಚರ್ಚೆಗೊಳಪಡುತ್ತಿದೆ.

ಜನಪ್ರತಿನಿಧಿಗಳೇಕೆ ಮೌನ: ಜಿಲ್ಲೆಗೆ ಒಂದಷ್ಟುಉತ್ತಮ ಯೋಜನೆ ಬರಲು, ಸಮಗ್ರ ಅಭಿವೃದ್ಧಿಯಹಿತದೃಷ್ಟಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು,ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕು. ಅದರಲ್ಲೂಸಹಕಾರಿ ವಲಯ ಸಕ್ಕರೆ ಕಾರ್ಖಾನೆ ಹಿತ ಕಾಯುವಲ್ಲಿಪಕ್ಷ ಹಾಗೂ ರಾಜಕೀಯ ಪ್ರತಿಷ್ಠೆ ಬದಿಗಿಟ್ಟು ಚಿಂತನೆನಡೆಸಿದರೆ, ಕಾರ್ಖಾನೆಯನ್ನು ಪುನಃ ಆರಂಭಿಸಲುಯಾವುದೇ ಸಮಸ್ಯೆ ಇಲ್ಲ. ಆದರೆ ಈ ಹಿಂದೆ ಆಗಿರುವತಪ್ಪುಗಳ ಹೊಣೆ ಯಾರ ತಲೆಗೆ ಕಟ್ಟಬೇಕು ಎಂಬುದರಕುರಿತೇ ದೊಡ್ಡ ರಾಜಕೀಯ ನಡೆಯುತ್ತಿದೆ. ಹೀಗಾಗಿಕಾರ್ಖಾನೆ ಪುನಾರಂಭದ ಮಾತು, ರೈತ ವಲಯದಲ್ಲಿಮಾತ್ರ ತೀವ್ರವಿದೆ. ಆಡಳಿತ ಮಂಡಳಿಯಾಗಲಿ,ಸರ್ಕಾರದ ಮಟ್ಟದಲ್ಲಾಗಲಿ, ಈ ಕಾರ್ಖಾನೆಪುನಾರಂಭದ ಗಂಭೀರ ಪ್ರಯತ್ನ ನಡೆಯುತ್ತಿಲ್ಲ ಎಂಬಆರೋಪ ಕೇಳಿ ಬಂದಿದೆ.„ಸಾಲದ ಹಣ ದುರ್ಬಳಕೆ ಆರೋಪ: ರನ್ನ ಸಹಕಾರಿಸಕ್ಕರೆ ಕಾರ್ಖಾನೆ ವಿಷಯದಲ್ಲಿ ಡಿಸಿಸಿ ಬ್ಯಾಂಕ್‌ಪಾತ್ರವೂ ಇದೆ. ಈ ಬ್ಯಾಂಕ್‌ನಿಂದ ಕಾರ್ಖಾನೆಗೆನೀಡಿದ ಸಾಲದ 12 ಕೋಟಿ ಹಣ ದುರ್ಬಳಕೆಯಾಗಿದೆಎಂಬುದು ಇದೇ ಬ್ಯಾಂಕಿನ ಕೆಲ ನಿರ್ದೇಶಕರ, ರೈತಸಂಘ ಮತ್ತು ಕೆಲ ರಾಜಕೀಯ ನಾಯಕರ ಆರೋಪ.ಅಲ್ಲದೇ ವಿವಿಧ ಬ್ಯಾಂಕ್‌ಗಳಲ್ಲಿ ಶೇರುದಾರ ರೈತರಹೆಸರಿನಲ್ಲಿ ಸಾಲ ಕೂಡ ಪಡೆಯಲಾಗಿದೆ. ಇದರಿಂದರೈತರು, ಕೃಷಿ ಇಲ್ಲವೇ ಬೇರೆ ಬೇರೆ ಕಾರಣಕ್ಕೆ ಹೊಸಸಾಲ ಪಡೆಯಲು ಯಾವುದೇ ಬ್ಯಾಂಕ್‌ಗೆ ಹೋದರೂಅವರಿಗೆ ಸಾಲ ದೊರೆಯುತ್ತಿಲ್ಲ. ಇದರಿಂದಯಾರದೋ ರಾಜಕೀಯ ಪ್ರತಿಷ್ಠೆ ಅಥವಾ ತಪ್ಪಿಗೆಮುಗ್ಧ ರೈತರು, ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿಎದುರಾಗಿದೆ.

ಮೊದಲ ಕ್ರಮ ಆರಂಭ: ರನ್ನ ಕಾರ್ಖಾನೆಗೆಸಾಲ ನೀಡಿದ ಅವಧಿಯಲ್ಲಿ ಒಟ್ಟು 14 ಷರತ್ತುಹಾಕಲಾಗಿತ್ತು. ಕಾರ್ಖಾನೆಯಲ್ಲಿ ಹೊಸ ಗೋದಾಮುಮತ್ತು ಇಟಿಪಿ ಕಾಮಗಾರಿ ಆಧುನೀಕರಣಕ್ಕಾಗಿ14 ಷರತ್ತುಗಳೊಂದಿಗೆ 12 ಕೋಟಿ ರೂ. ಸಾಲನೀಡಲಾಗಿತ್ತು. ಈ ಸಾಲದ ಮೊತ್ತವನ್ನು ಡಿಸಿಸಿಬ್ಯಾಂಕ್‌ನ ರನ್ನನಗರ ಶಾಖೆಯಿಂದ 2018ರ ಆಗಸ್ಟ್‌20ರಂದು 5 ಕೋಟಿ ರೂ., 2018ರ ಸೆ.7ರಂದು 5ಕೋಟಿ ರೂ., ಅದೇ ಸೆ.12ರಂದು 1ಕೋಟಿ ರೂ.,2018ರ ಸೆ.17ರಂದು 1 ಕೋಟಿ ರೂ. ಹೀಗೆ ಒಟ್ಟು12 ಕೋಟಿ ರೂ. ಸಾಲದ ಮೊತ್ತ ಮಂಜೂರುಮಾಡಲಾಗಿತ್ತು.

ಈ ಸಾಲದ ಮೊತ್ತ ಮಂಜೂರುಮಾಡುವ ವೇಳೆ ಡಿಸಿಸಿ ಬ್ಯಾಂಕ್‌ನ ರನ್ನನಗರ ಶಾಖಾವ್ಯವಸ್ಥಾಪಕ ಎ.ಬಿ. ಪಾಟೀಲ ಎಂಬುವರು ಷರತ್ತುಪಾಲನೆ ಮಾಡದೇ ಇರುವುದು, ಡಿಸಿಸಿ ಬ್ಯಾಂಕ್‌ನನಿರ್ದೇಶಕರ ತನಿಖಾ ತಂಡ ಕಾರ್ಖಾನೆಗೆ ಭೇಟಿನೀಡಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ.ಹೀಗಾಗಿ ಶಾಖಾ ವ್ಯವಸ್ಥಾಪಕರು ಕರ್ತವ್ಯನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದರಿಂದಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಡಿಸಿಸಿಬ್ಯಾಂಕ್‌ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ.

Advertisement

ಸದ್ಯ ಡಿಸಿಸಿ ಬ್ಯಾಂಕ್‌ನ ಕಲಾದಗಿ ಶಾಖೆವ್ಯವಸ್ಥಾಪಕರಾಗಿರುವ, ಹಿಂದೆ ರನ್ನನಗರ ಶಾಖೆಯಕಿರಿಯ ಶಾಖಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಎ.ಬಿ. ಪಾಟೀಲ ಅವರನ್ನು ಶಿಸ್ತು ವಿಚಾರಣೆಯನ್ನುಕಾಯ್ದಿರಿಸಿ, ಬ್ಯಾಂಕಿನ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಮಾನತು ಅವಧಿಯಲ್ಲಿಕೇಂದ್ರ ಕಚೇರಿಯನ್ನು ಕೇಂದ್ರ ಸ್ಥಳವನ್ನಾಗಿನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ ನಿಯಮಾವಳಿಪ್ರಕಾರ ಜೀವನಾಂಶ ಭತ್ತೆ ಸಂದಾಯ ಮಾಡುವುದು,ಸಕ್ಷಮ ಪ್ರಾಧಿಕಾರಿಯ ಅನುಮತಿ ಇಲ್ಲದೇ ಕೇಂದ್ರಸ್ಥಳ ಬಿಡದಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಶ್ರೀಶೈಲ ಕೆ. ಬಿರಾದಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next