ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ “ಶುಗರ್ ಫ್ಯಾಕ್ಟರಿ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿತು.
“ಬಾಲಮಣಿ ಪ್ರೂಡಕ್ಷನ್ಸ್’ ಬ್ಯಾನರ್ನಲ್ಲಿ ಗಿರೀಶ್ ಆರ್ ನಿರ್ಮಿಸುತ್ತಿರುವ “ಶುಗರ್ ಫ್ಯಾಕ್ಟರಿ’ ಚಿತ್ರಕ್ಕೆ ದೀಪಕ್ ಅರಸ್ ನಿರ್ದೇಶನವಿದೆ. ಇನ್ನು “ಶುಗರ್ ಫ್ಯಾಕ್ಟರಿ’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಸೋನಾಲ್ ಮಾಂಟೆರೊ, ಶಿಲ್ಪಾ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಗೋವಿಂದೇ ಗೌಡ,ಸೂರಜ್ ಮತ್ತಿತರರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಮನಸ್ಮಿತ ಹಾಡು ಹಬ್ಬ: ಜೂನ್ನಲ್ಲಿ ತೆರೆಗೆ
ಗೋವಾ, ಬೆಂಗಳೂರು, ಮೈಸೂರುಹಾಗೂ ಕಜಾಕಿಸ್ಥಾನದಲ್ಲಿಸುಮಾರು 55 ದಿನಗಳ ಕಾಲ “ಶುಗರ್ ಫ್ಯಾಕ್ಟರಿ’ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಹಾಡುಗಳಿಗೆ ಕಬೀರ್ ರಫಿ ಸಂಗೀತ ಸಂಯೋಜಿಸಿದ್ದು, ಜಯಂತ್ ಕಾಯ್ಕಿಣಿ,ಯೋಗರಾಜ್ ಭಟ್, ಚೇತನ್ ಕುಮಾರ್, ಚಂದನ್ ಶೆಟ್ಟಿ, ಅರಸು ಅಂತಾರೆ, ರಾಘವೇಂದ್ರ ಕಾಮತ್, ಗೌಸ್ಫಿರ್ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.
Related Articles
ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ ನೀಡಿರುವ ಚಿತ್ರತಂಡ ಆಗಸ್ಟ್ ವೇಳೆಗೆ “ಶುಗರ್ ಫ್ಯಾಕ್ಟರಿ’ಯನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.