ಹಳಿಯಾಳ: ಬುಧವಾರ ತಾಲೂಕಿನ ಎರಡು ಗ್ರಾಮಗಳಲ್ಲಿ ನಡೆದ ಪ್ರತ್ಯೇಕ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ 40 ಎಕರೆ ಪ್ರದೇಶದಲ್ಲಿನ ಕಬ್ಬು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ.
ತಾಲೂಕಿನ ಕೆಕೆ ಹಳ್ಳಿ ಗ್ರಾಮದಲ್ಲಿ ರೈತ ಗುರುನಾಥ ಕೆಲಕೆರಿ ಅವರ 1.5ಎಕರೆ ಮತ್ತು ಕೃಷ್ಣಾ ಪಾಟೀಲ್ ಅವರ 2.5 ಎಕರೆ ಒಟ್ಟೂ 4 ಎಕರೆ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಇನ್ನೊಂದು ಘಟನೆಯಲ್ಲಿ ದೊಡ್ಡಕೊಪ್ಪ ಗ್ರಾಮದ ಸುಳಗೇಕರ ಎಂಬ ಒಂದೇ ಕುಟುಂಬದ 8 ಜನ ರೈತರಿಗೆ ಸೇರಿದ 17 ಎಕರೆ ಹಾಗೂ ಇದೇ ಗ್ರಾಮದ ಮಾರುತಿ ಬಾವಕರ ಅವರ 5 ಎಕರೆ, ಫಕಿರ ತೊರ್ಲೆಕರ 4 ಎಕರೆ, ರಾವಳು ಬಾವಕರ 2 ಎಕರೆ, ದೇಮಣ್ಣಾ ಬಾವಕರ 2.5 ಎಕರೆ ಒಟ್ಟೂ 30 ಎಕರೆ ಪ್ರದೇಶದಲ್ಲಿನ ಕಬ್ಬು ಬೆಂಕಿ ಅವಘಡಕ್ಕೆ ಹಾನಿಗೊಳಗಾಗಿದೆ.
ಸ್ಥಳಕ್ಕೆ ಹಳಿಯಾಳ ಅಗ್ನಿಶಾಮಕ ದಳದ ಅಧಿಕಾರಿಗಳಾದ ಎಸ್ ಎಸ್ ಲಕ್ಷ್ಮೇಶ್ವರ ಹಾಗೂ ಪಿಸಿ ಜಾರ್ಜ ಅವರು ಭೇಟಿ ನೀಡಿ ತಮ್ಮ ಸಿಬ್ಬಂದಿಗಳೊಂದಿಗೆ ಅಗ್ನಿ ನಂದಿಸುವ ಕಾರ್ಯ ಮಾಡಿದರು.
ಮೂರನೇ ಘಟನೆಯಲ್ಲಿ ತಾಲೂಕಿನ ಚಿಬ್ಬಲಗೇರಿ ಗ್ರಾಪಂ ವ್ಯಾಪ್ತಿಯ ತೆಗ್ನಳ್ಳಿ ಗ್ರಾಮದಲ್ಲಿ ಮುತ್ತಲ ಮರಕ್ಕೆ ಬೆಂಕಿ ತಾಗಿತ್ತು ಅಗ್ನಿ ಶಾಮಕದಳದವರು ಇಲ್ಲಿಯು ಬೆಂಕಿ ನಂದಿಸಿದರು.
ಇದನ್ನೂ ಓದಿ : ಕೆಜಿಎಫ್-2 ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಅಧಿಕೃತ ಘೋಷಣೆ ಮಾಡಿದ ಹೊಂಬಾಳೆ ಫಿಲಂಸ್