Advertisement

SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ

03:30 PM Jan 09, 2025 | Team Udayavani |

ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ (SUFC) ಇಂಟರ್-ಸಿಟಿ ಟೂರ್ನಮೆಂಟ್‌ನ ಪ್ರಥಮ ಆವೃತ್ತಿಯನ್ನು ಘೋಷಿಸಿದೆ. ಇದು ಎಸ್‌ಯುಎಫ್‌ಸಿಯ ಪ್ರಥಮ-ಪ್ರಕಾರದ ಸ್ಪರ್ಧೆಯಾಗಿದ್ದು, ಈ ಟೂರ್ನಮೆಂಟ್ ನಲ್ಲಿ ಸೌತ್ ಯುನೈಟೆಡ್ ಫುಟ್ಬಾಲ್ ಅಕಾಡೆಮಿ (SUFA) ಪುಣೆಯ ತಂಡಗಳು ಎಸ್‌ಯುಎಫ್‌ಸಿ ಬೆಂಗಳೂರು ತಂಡದ ವಿರುದ್ಧ ಸ್ಪರ್ಧಿಸುತ್ತಿದೆ. ಜನವರಿ 11 ಮತ್ತು 12 ರಂದು ಹಲಸೂರಿನ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಲ್ಲಿ ನಡೆಯಲಿದೆ.

Advertisement

ಈ ಟೂರ್ನಮೆಂಟ್ 250ಕ್ಕೂ ಹೆಚ್ಚು ಯುವ ಫುಟ್ಬಾಲ್ ಆಟಗಾರರನ್ನು ಒಂದುಗೂಡಿಸುವ ಉದ್ದೇಶ ಹೊಂದಿದೆ. ತಳಮಟ್ಟದ ಫುಟ್ಬಾಲ್ ಆಟಗಾರರು ತಮ್ಮ ಪ್ರಾಮುಖ್ಯತೆಯನ್ನು ಪ್ರದರ್ಶಿಸಲು ಬೆಂಗಳೂರಿನ ಆಧಾರಿತ ಕ್ಲಬ್‌ ವೇದಿಕೆಯನ್ನು ಒದಗಿಸುತ್ತದೆ. ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಇಂಟರ್-ಸಿಟಿ ಪಂದ್ಯಾವಳಿಯು ಅಂಡರ್-7, ಅಂಡರ್-9, ಅಂಡರ್-11, ಅಂಡರ್-13, ಅಂಡರ್-15, ಮತ್ತು ಅಂಡರ್-17 ಸೇರಿ ಆರು ವಯೋಮಾನದ ವಿಭಾಗಗಳನ್ನು ಒಳಗೊಂಡಿರುತ್ತದೆ. ಈ ಟೂರ್ನಮೆಂಟ್ ಎರಡು ದಿನಗಳ ಕಾಲ ನಡೆಯಲಿದೆ. ಮೊದಲ ದಿನ ರೌಂಡ್- ರಾಬಿನ್ ಪಂದ್ಯಗಳು ಮತ್ತು ಎರಡನೇ ದಿನ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿದೆ. ಈ ಟೂರ್ನಮೆಂಟ್ ಹೈ ವೋಲ್ಟೆಜ್ ಮ್ಯಾಚ್ ಗಳನ್ನು ನೀಡುವುದರ ಜೊತೆಗೆ ಭಾಗವಹಿಸುವವರಿಗೆ ಫುಟ್ಬಾಲ್ ಪರಿಸರದಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಸಹ ನೀಡುತ್ತದೆ.

ಕೇವಲ ಸ್ಪರ್ಧೆಯಷ್ಟೇ ಅಲ್ಲ ಇದರ ಆಚೆಗೂ ಟೂರ್ನಮೆಂಟ್ ಯುವ ಆಟಗಾರರಿಗೆ ವಿಶಿಷ್ಟ ಅನುಭವಗಳನ್ನು ಒದಗಿಸುತ್ತಿದೆ. ಸೌತ್ ಯುನೈಟೆಡ್ ಸ್ಪೋರ್ಟ್ಸ್ ಫೌಂಡೇಷನ್‌ನ ಸ್ಪೋರ್ಟಿಂಗ್ ಡೈರೆಕ್ಟರ್ ಟೆರಿ ಫೀಲನ್ ಅವರನ್ನು ಭೇಟಿಯಾಗುವ ಮತ್ತು ಕ್ಲಬ್‌ನ ಹಿರಿಯ ತಂಡದ ಆಟಗಾರರೊಂದಿಗೆ ಸಂವಹನ ಕಾರ್ಯಕ್ರಮವು ಕೂಡ ಇರಲಿದೆ. ಜೊತೆಗೆ ಜನವರಿ 11 ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಬೆಂಗಳೂರು ಎಫ್‌ಸಿ ಮತ್ತು ಮೊಹಮ್ಮದನ್ ಎಸ್‌ಸಿ ನಡುವಿನ ಇಂಡಿಯನ್ ಸೂಪರ್ ಲೀಗ್ (ISL) ಪಂದ್ಯದ ವೀಕ್ಷಣೆ ಸಹ ಆಯೋಜಿಸಿದೆ.

ಪಂದ್ಯಾವಳಿಯ ಭಾಗವಾಗಿ, ಎಸ್‌ಯುಎಫ್‌ಸಿ ಯ ಮುಖ್ಯ ಸ್ಕೌಟ್ ಮತ್ತು ವಿಶ್ಲೇಷಕ, ಇಂದ್ರೇಶ್ ನಾಗರಾಜನ್ ಆಟಗಾರರಿಗೆ ವಿಶೇಷ ಕಾರ್ಯಗಾರವನ್ನು ನಡೆಸಲಿದ್ದು, ವೀಡಿಯೊ ವಿಶ್ಲೇಷಣೆಯನ್ನು ಬಳಸಿಕೊಂಡು ಪ್ರಮುಖ ಫುಟ್‌ಬಾಲ್ ಪರಿಕಲ್ಪನೆಗಳನ್ನು ಅರ್ಥಮಾಡಿಸಲಿದ್ದಾರೆ. ಈ ಕಾರ್ಯಾಗಾರವು ಆಟಗಾರರ ವೀಕ್ಷಣೆ, ಪ್ರತಿಬಿಂಬ ಮತ್ತು ಕಾರ್ಯಕ್ಷಮತೆಯ ಕೌಶಲ್ಯಗಳನ್ನು ಸುಧಾರಿಸುವ ಮೂಲಕ ಅವರ ಕಲಿಕೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next