ಹೊಸದಿಲ್ಲಿ: ಚೀನದ ಸುಝೂನಲ್ಲಿ ಮೇ 14ರಿಂದ 21ರ ತನಕ ನಡೆಯಲಿರುವ ಸುದಿರ್ಮನ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಶ್ವದ ನಂ. 9 ಆಟಗಾರ ಎಚ್.ಎಸ್. ಪ್ರಣಯ್ ಮತ್ತು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಭಾರತದ ನೇತೃತ್ವವನ್ನು ವಹಿಸಲಿದ್ದಾರೆ.
Advertisement
ಈ ಕೂಟಕ್ಕಾಗಿ ರಾಷ್ಟ್ರೀಯ ಸೀನಿಯರ್ ಆಯ್ಕೆ ಸಮಿತಿ ಸಂತುಲಿತ ತಂಡವನ್ನು ಆರಿಸಿದೆ. ಮಿಶ್ರ ತಂಡ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಪದಕ ಗೆಲ್ಲುವುದು ಭಾರತದ ಗುರಿಯಾಗಿದೆ.
ಭಾರತ “ಸಿ” ವಿಭಾಗದಲ್ಲಿ ಸ್ಥಾನ ಪಡೆದಿದೆ. ಮಲೇಷ್ಯಾ, ಚೈನೀಸ್ ತೈಪೆ ಮತ್ತು ಆಸ್ಟ್ರೇಲಿಯ ಈ ವಿಭಾಗದ ಉಳಿದ ತಂಡಗಳು.