Advertisement

ಆ ಕಾರಣಕ್ಕಾಗಿ “ಬ್ರಹ್ಮಾಸ್ತ್ರ“ ದಲ್ಲಿ ನಟಿಸುವ ಆಫರ್‌ ತಿರಸ್ಕರಿಸಿದ  ಸ್ಟಾರ್‌ ನಟ

05:11 PM Sep 18, 2022 | Team Udayavani |

ಹೈದರಾಬಾದ್: ʼಬ್ರಹ್ಮಾಸ್ತ್ರʼ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್‌ ಮಾಡಿದೆ. ಬಾಲಿವುಡ್‌ ಗೆ ಬಹು ಸಮಯದ ಬಳಿಕ ದೊಡ್ಡ ಗೆಲುವು ಸಿಕ್ಕಿದೆ. ಚಿತ್ರ ಯಶಸ್ವಿಯಾಗಿ ಸಾಗುತ್ತಿರುವ ಬೆನ್ನಲ್ಲೇ ಸ್ಟಾರ್‌ ನಟರೊಬ್ಬರು ʼಬ್ರಹ್ಮಾಸ್ತ್ರʼ ಚಿತ್ರದ ಬಗ್ಗೆ ಮಾತಾನಾಡಿದ್ದಾರೆ.

Advertisement

2016 ರಲ್ಲಿ ಟೈಗರ್‌ ಶ್ರಾಫ್ ಅಭಿನಯದ ʼಭಾಗಿʼ‌ ಚಿತ್ರದ ಮೂಲಕ ಬಾಲಿವುಡ್‌ ಗೆ ಎಂಟ್ರಿ ಕೊಟಿದ್ದ ಟಾಲಿವುಡ್‌ ಸ್ಟಾರ್‌ ನಟ ಸುಧೀರ್‌ ಬಾಬು ಇತ್ತೀಚಿಗೆ ರಿಲೀಸ್‌ ಆಗಿರುವ “ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ” ಚಿತ್ರದ ಪ್ರಚಾರದ ವೇಳೆ “ಬ್ರಹ್ಮಾಸ್ತ್ರ” ಚಿತ್ರದ ಬಗ್ಗೆ ಮಾತಾನಾಡಿದ್ದಾರೆ.

“ನನಗೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸಲು ಆಫರ್‌ ಬಂದಿತ್ತು. ಆದರೆ ನಾನು ಅದನ್ನು ತಿರಸ್ಕರಿಸಿದೆ. ನಾನು ಆ ಸಮಯದಲ್ಲಿ ಬೇರೆಯೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದೆ. ʼಬ್ರಹ್ಮಾಸ್ತ್ರʼ ದಲ್ಲಿ ನನ್ನ ಪಾತ್ರ ಚಾಲೇಜಿಂಗ್‌ ಆಗಿತ್ತು ಎಂದಿದ್ದಾರೆ.

ಆದರೆ ಸುಧೀರ್‌ ಅವರು ಯಾವ ಪಾತ್ರದಲ್ಲಿ ನಟಿಸಲಿದ್ದರು ಎಂದು ಹೇಳಿಲ್ಲ. ʼ ಸಮ್ಮೋಹನಂʼ ಚಿತ್ರಕ್ಕಾಗಿ ಅವರು ʼಬ್ರಹ್ಮಾಸ್ತ್ರʼ ಆಫರ್‌ ತಿರಸ್ಕರಿಸಿದ್ದರು ಎಂದು ವರದಿ ತಿಳಿಸಿದೆ.

ʼಸಮ್ಮೋಹನಂʼ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಅಷ್ಟಾಗಿ ಕಮಾಲ್‌ ಮಾಡಲಿಲ್ಲ. ಇಂದ್ರಗಂಟಿ ಮೋಹನಕೃಷ್ಣ ನಿರ್ದೇಶನದ “ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ” ಸುಧೀರ್‌ ಬಾಬು ಅವರೊಂದಿಗೆ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.‌

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next