Advertisement

ಸುದೀಪ್‌ ಹೆಸರು ತಂದರೆ ಕ್ಷಮೆ ಇಲ್ಲ, ಆತ ನನ್ನ ತಮ್ಮನಂತೆ

09:59 AM Aug 16, 2019 | Team Udayavani |

“ಕೆಂಪೇಗೌಡ-2′ ಚಿತ್ರದ ಬಿಡುಗಡೆಯ ನಂತರ ನಟ ಕೋಮಲ್‌ ಅವರ ಮೇಲೆ ನಡೆದ ಹಲ್ಲೆ ಘಟನೆ ಬೇರೆ ಬೇರೆ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ನಟ ಸುದೀಪ್‌ ಅವರ ಹೆಸರನ್ನು ಹರಿಬಿಟ್ಟಿದ್ದರು. ಈ ವಿಷಯ ನಟ ಕೋಮಲ್‌ ಅವರ ಹಿರಿಯ ಸೋದರ ಜಗ್ಗೇಶ್‌ ಅವರ ಗಮನಕ್ಕೆ ಬರುತ್ತಿದ್ದಂತೆ, ಕೂಡಲೇ ಎಚ್ಚೆತ್ತ ಕೋಮಲ್‌ ಹಿರಿಯ ಜಗ್ಗೇಶ್‌, ಟ್ವಿಟ್ಟರ್‌ನಲ್ಲಿ “ವೈಯಕ್ತಿಕ ಅನಿಸಿಕೆ ನಿರ್ಧಾರ ಮಾಡಿ ನನ್ನ ಕಲಾ ಬಂಧು ಸುದೀಪ್‌ ಹೆಸರು ಯಾರಾದರು ಈ ವಿಷಯದಲ್ಲಿ ತಂದರೆ ಕ್ಷಮೆಯಿಲ್ಲಾ.

Advertisement

ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ, ಕೆಡಿಸದಿರಿ ಮನಗಳ. ಸುದೀಪ್‌ ನನ್ನ ಒಡ ಹುಟ್ಟದಿದ್ದರು, ನನ್ನ ಹೆಮ್ಮೆಯ ತಮ್ಮನಂತೆ. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸುದೀಪ್‌ ಹೆಸರು ತರುತ್ತಿರುವವರ ವಿರುದ್ಧ ಜಗ್ಗೇಶ್‌ ಟ್ವಿಟ್ಟರ್‌ನಲ್ಲಿ ಗುಡುಗಿದ್ದಾರೆ. ಅಲ್ಲದೆ ಈ ಘಟನೆಗೂ ಮತ್ತು ನಟ ಸುದೀಪ್‌ ಅವರಿಗೂ ಯಾವುದೇ ಸಂಬಂಧ ಇಲ್ಲ. ಹೀಗಾಗಿ ಅನಗತ್ಯವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸುದೀಪ್‌ ಹೆಸರನ್ನು ತರಬಾರದು ಎಂದು ಜಗ್ಗೇಶ್‌ ವಿನಂತಿ ಮಾಡಿದ್ದಾರೆ.

ಸದ್ಯ ಕೋಮಲ್‌ ಮೇಲಿನ ಹಲ್ಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮಲ್ಲೇಶ್ವರಂ ಪೊಲೀಸರು ಹಲ್ಲೆ ಮಾಡಿರುವ ವಿಜಿ ಎಂಬುವವನನ್ನು ಬಂದಿಸಿ ವಿಚಾರಣೆ ಮಾಡುತ್ತಿದ್ದಾರೆ. ಇತ್ತ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಅತ್ತ ಪ್ರಕರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮಲ್‌ ಮೇಲಿನ ಹಲ್ಲೆಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಒಟ್ಟಾರೆ ಈ ಬಗ್ಗೆ ಪೊಲೀಸ್‌ ತನಿಖೆಯ ಬಳಿಕ ಪೂರ್ಣಗೊಂಡ ಬಳಿಕವಷ್ಟೇ ಸತ್ಯ ಏನೆಂಬುದು ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next