Advertisement

ನಾ ಕ್ಲ್ಯಾಪ್ ಮಾಡಿದ ಚಿತ್ರಕ್ಕೆ ಕೆಟ್ಟದ್ದೇಕೆ ಬಯಸಲಿ: ನಟ ಸುದೀಪ್

04:26 PM Oct 11, 2021 | Team Udayavani |

ಬೆಂಗಳೂರು : ನಾನು ಕ್ಲ್ಯಾಪ್ ಮಾಡಿದ ಸಲಗ ಚಿತ್ರಕ್ಕೆ ನಾನೇಕೆ ಕೇಡು ಬಯಸಲಿ ಎಂದು ನಟ ಸುದೀಪ್ ನುಡಿದರು.

Advertisement

ಇಂದು ತಮ್ಮ ಕೋಟಿಗೊಬ್ಬ 3 ಸಿನಿಮಾ ಕುರಿತು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ದಿನ ನಮ್ಮ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಚಿತ್ರರಂಗದಲ್ಲಿ ನಾವೆಲ್ಲರೂ ಒಂದೇ. ಸಲಗ ಚಿತ್ರಕ್ಕೆ ನನ್ನನ್ನು ಕರೆದು ಕ್ಲ್ಯಾಪ್ ಮಾಡಿಸಿದರು. ಅಂತಹ ಚಿತ್ರಕ್ಕೆ ನಾನೇಕೆ ಕೆಟ್ಟದ್ದು ಬಯಸಲಿ ಎಂದರು.

ಇದೇ 14 ರಂದು ಕೋಟಿಗೊಬ್ಬ 3 ಹಾಗೂ ಸಲಗ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದೇ ದಿನ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಸಹಜವಾಗಿ ಸ್ಟಾರ್ ವಾರ್‍ ಗೆ ದಾರಿ ಮಾಡಿಕೊಡುತ್ತದೆ. ಬೆಳ್ಳಿ ಪರದೆ ಮೇಲೆ ಈ ಚಿತ್ರಗಳು ಸೆಣಸಲಿವೆ ಎನ್ನುವ ಮಾತು ಕೇಳಿ ಬರುತ್ತಿದೆ. ಇಂತಹ ಮಾತುಗಳಿಗೆ ಸುದೀಪ್ ಇಂದು ಗುದ್ದು ಕೊಟ್ಟರು.

ಇನ್ನು ಸುದೀಪ್ ಅವರು ಸಲಗ ಚಿತ್ರಕ್ಕೆ ಬೆಂಬಲ ಸೂಚಿಸುತ್ತಲೆ ಬಂದಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ತೆರಳಿಸಿ ಮೊದಲ ದೈಶ್ಯಕ್ಕೆ ಆರಂಭಿಕ ಫಲಕ ತೋರಿಸಿ ಹಾರೈಸಿದರು. ಅಂದಿನಿಂದ ಚಿತ್ರದ ಪ್ರತಿಯೊಂದು ಹಂತದಲ್ಲೂ ಬೆಂಬಲ ನೀಡಿ ಪ್ರೋತ್ಸಾಹಿಸಿದರು. ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾದ ದಿನವೂ ಸುದೀಪ್ ಅವರು ಟ್ವೀಟ್ ಮಾಡಿ ಶುಭ ಕೋರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next