“ವಿಕ್ರಾಂತ್ ರೋಣ’ ಸಿನಿಮಾದ ನಂತರ ನಟ ಕಿಚ್ಚ ಸುದೀಪ್ ಯಾವ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎಂಬ ಅವರ ಅಭಿಮಾನಿಗಳ ಪ್ರಶ್ನೆಗೆ ಕೆಲ ದಿನಗಳ ಹಿಂದಷ್ಟೇ ಉತ್ತರಿಸಿದ್ದ ಸುದೀಪ್, ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಸುಳಿವು ನೀಡಿದ್ದರು. ಈ ಮೂರು ಸಿನಿಮಾಗಳ ಪೈಕಿ ಮೊದಲ ಸಿನಿಮಾ ಯಾವುದು? ಅದರ ಹೆಸರೇನು? ನಿರ್ದೇಶಕರು ಯಾರು? ಎಂಬ ಹತ್ತಾರು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಡುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ನಿರ್ಮಾಣ ಸಂಸ್ಥೆ ವಿಡಿಯೋವೊಂದನ್ನು ಬಿಟ್ಟು ಶೀಘ್ರದಲ್ಲಿಯೇ ಟೀಸರ್ ಎಂದು ಹೇಳಿತ್ತು. ಕಳೆದ ಕೆಲ ದಿನಗಳಿಂದ ಸುದೀಪ್ ಹೊಸ ಸಿನಿಮಾದ ಟೀಸರ್ ಮೇಕಿಂಗ್ ಕೆಲಸ ಕೂಡ ತೆರೆಮರೆಯಲ್ಲಿ ಭರದಿಂದ ನಡೆಯುತ್ತಿದೆ. ಅದರಂತೆ, ಸುದೀಪ್ ಅಭಿಮಾನಿಗಳ ಚಿತ್ತ ಈಗ ಜೂನ್‌ನತ್ತ ನೆಟ್ಟಿದೆ. ತಮ್ಮ ನೆಚ್ಚಿನ ಕಿಚ್ಚನ ಮುಂದಿನ ಸಿನಿಮಾ ಯಾವುದು ಎಂದು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಇದನ್ನೂ ಓದಿ:Foxconn ಗೆ ಜುಲೈ 1ರ ವೇಳೆಗೆ ಪೂರ್ತಿ ಭೂಮಿ ಹಸ್ತಾಂತರ: ಎಂ.ಬಿ.ಪಾಟೀಲ್
ಇನ್ನು ಕೆಲ ದಿನಗಳ ಹಿಂದಷ್ಟೇ ಸುದೀಪ್ ತಮ್ಮ ಹೊಸ ಸಿನಿಮಾದ ಬಗ್ಗೆ ಸಣ್ಣ ಸುಳಿವು ಕೊಟ್ಟಿದ್ದರು. ಆ ಸಿನಿಮಾದ ನಿರ್ಮಾಪಕರು ಯಾರು ಎಂದು ಸಣ್ಣದೊಂದು ಝಲಕ್ ರಿಲೀಸ್ ಮಾಡುವ ಮೂಲಕ ತಿಳಿಸಿದ್ದರು. ಇವೆಲ್ಲದರ ನಡುವೆ ಈ ಸಿನಿಮಾದ ಬಗ್ಗೆ ಒಂದಷ್ಟು ಅಂತೆ-ಕಂತೆಗಳು ಜೋರಾಗಿ ಹರಿದಾಡುತ್ತಿದ್ದು, ಅದೆಲ್ಲದಕ್ಕೂ ಟೀಸರ್ ಮೂಲಕ ತೆರೆ ಬೀಳಬಹುದು ಎನ್ನಲಾಗುತ್ತಿದೆ.