Advertisement

ನೋಂದಣಿಯೇ ಆಗದ ಶಿಶು ಕೇಂದ್ರಗಳು

03:51 PM Jul 16, 2018 | |

ರಾಂಚಿಯಲ್ಲಿನ ಮಿಷನರೀಸ್‌ ಆಫ್ ಚಾರಿಟೀಸ್‌ನಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರು ಶಿಶುಗಳನ್ನು ಮಾರಾಟ ಮಾಡಿದ ಪ್ರಕರಣ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, ದೇಶದಲ್ಲಿನ 1,300ಕ್ಕೂ ಹೆಚ್ಚು ಮಕ್ಕಳ ಆರೈಕೆ ಕೇಂದ್ರಗಳು ಬಾಲನ್ಯಾಯ ಕಾಯ್ದೆಯನ್ವಯ ನೋಂದ ಣಿಯೇ ಆಗಿಲ್ಲ ಎಂಬ ಮಾಹಿತಿಯನ್ನು ಮಕ್ಕಳ ಹಕ್ಕು ಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಆಯೋಗ ಬಹಿರಂಗಪಡಿಸಿದೆ. ಆಯೋಗದ ವರದಿಯಲ್ಲಿ ಏನಿದೆ ಎಂಬ ಮಾಹಿತಿ ಇಲ್ಲಿದೆ.

Advertisement

5,850 ದೇಶದಲ್ಲಿ ನೋಂದಣಿ ಆಗಿರುವ ಆರೈಕೆ ಕೇಂದ್ರ. 
1,339 ನೋಂದಣಿಯೇ ಆಗದ ಕೇಂದ್ರಗಳು .
2,32,937 ನೋಂದಣಿ  ಆಗಿರುವ,ಆಗಿರದ ಕೇಂದ್ರದ ಮಕ್ಕಳು.

ಕೇರಳದಲ್ಲಿ-1165  ಮಹಾರಾಷ್ಟ್ರದಲ್ಲಿ- 110 ಮಣಿಪುರ-13 ತಮಿಳುನಾಡು -9 ಗೋವಾ- 8 ರಾಜಸ್ಥಾನ-4 ನಾಗಾಲ್ಯಾಂಡ್‌- 2

ನಿಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೇಂದ್ರಗಳನ್ನೂ ನೋಂದಣಿ ಮಾಡಿಸಿ ಕೊಳ್ಳಿ ಎಂದು ರಾಜ್ಯ ಸರಕಾರಗಳಿಗೆ ನಾವು ಹಲವು ಬಾರಿ ಕೋರಿಕೊಂಡಿದ್ದೇವೆ. ಕೆಲವು ರಾಜ್ಯಗಳು ಸಕಾರಾತ್ಮಕವಾಗಿ ಸ್ಪಂದಿಸಿದರೆ, ಇನ್ನು ಕೆಲವು ಕ್ಯಾರೇ ಎಂದಿಲ್ಲ.
ಯಶ್ವಂತ್‌ ಜೈನ್‌, ಎನ್‌ಸಿಪಿಸಿಆರ್‌ ಸದಸ್ಯ

ಎಲ್ಲ ಮಕ್ಕಳ ಆರೈಕೆ ಕೇಂದ್ರಗಳು, ಅನಾಥಾಶ್ರಮಗಳು ಕಡ್ಡಾಯವಾಗಿ ನೋಂದಣಿ ಆಗುವಂತೆ ನೋಡಿಕೊಳ್ಳಬೇಕು. ಆಗ ಅವುಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಣಲು ಸಾಧ್ಯ. 
ಕೈಲಾಶ್‌ ಸತ್ಯಾರ್ಥಿ, ಮಕ್ಕಳ ಹಕ್ಕುಗಳ ಹೋರಾಟಗಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next