Advertisement
ಅಕ್ಟೋಬರ್ ತಿಂಗಳ 10 ರಂದು ಹರಾಜು ಪ್ರಕ್ರಿಯೆ ಆರಂಭಗೊಂಡು ಸರಾಸರಿ ರೂ.200 ರಿಂದ 251 ರ ವರೆಗೂ ಹರಾಜು ಪ್ರಕ್ರಿಯೆ ಮಂಗಳವಾರದ ವರೆಗೂ ಗರಿಷ್ಠ 251 ರ ವರೆಗೂ ಮಾರಾಟವಾಗುತ್ತಿತ್ತು. ಆದರೆ ಬುಧವಾರ ಮಧ್ಯಮ ದರ್ಜೆ ತಂಬಾಕಿಗೆ (ಮಧ್ಯಮ ದರ್ಜೆ) 251ರಿಂದ 147 ಕ್ಕೆ ಕುಸಿತಗೊಂಡು ಪ್ರತಿ ಕೆ.ಜಿ.ತಂಬಾಕಿಗೆ ಸರಿಸುಮಾರು 100 ಕಡಿಮೆಯಾಗಿರುವುದಕ್ಕೆ ರೈತರು ಆಕ್ರೋಶ ಭರಿತರಾಗಿ ಮೂರು ಪ್ಲಾಟ್ ಫಾಂ ಗಳ ಹರಾಜು ಪ್ರಕ್ರಿಯೆ ನಿಲ್ಲಿಸಿ ಮಾರುಕಟ್ಟೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಆಕ್ರೋಶಗೊಂಡ ರೈತರನ್ನು ಸಮಾಧಾನಪಡಿಸಲು ಯತ್ನಿಸಿದ ತಂಬಾಕು ಹರಾಜು ಅಧೀಕ್ಷಕರ ಮಾತಿಗೂ ಕ್ಯಾರೆ ಎನ್ನದ ರೈತರು ಪಿರಿಯಾಪಟ್ಟಣ-ಹಾಸನ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಪ್ರತಿಭಟನಾ ನಿರತ ರೈತರು ಮಾತನಾಡಿ ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ಹಿಂದಿನ ದಿನದ ದರವನ್ನು ನೀಡಿ, ಇಲ್ಲದಿದ್ದರೆ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿ ಎಂದು ರೈತರು ಆಗ್ರಹಿಸಿದರು.
ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಮಂಡಳಿಯ ಉಪಾಧ್ಯಕ್ಷ ಎಚ್. ಸಿ.ಬಸವರಾಜ್ ಆಗಮಿಸಿ ರೈತರನ್ನು ಸಮಾಧಾನಪಡಿಸಲು ಮುಂದಾದರು. ಈ ವೇಳೆ ಮಾಜಿ ಶಾಸಕ ಕೆ.ವೆಂಕಟೇಶ್ ಮಾತನಾಡಿ ಅತಿವೃಷ್ಟಿಯಿಂದ ತಂಬಾಕು ಉತ್ಪಾದನೆ ಕಡಿಮೆಯಾಗಿದ್ದು ರೈತರಿಗೆ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ ರೈತರನ್ನು ಉಳಿಸುವ ನಿಟ್ಟಿನಲ್ಲಿ ತಂಬಾಕು ಮಂಡಳಿಯ ರೈತರಿಗೆ ಸಹಕರಿಸಬೇಕು. ಸರಿಯಾದ ಬೆಲೆ ಕೊಡದೆ ಇರುವ ಕಾರಣಕ್ಕೆ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಇಂದಿನ ದಿನಗಳಲ್ಲಿ ಈ ಹಿಂದೆ ನೀಡುತ್ತಿದ್ದ ಬೆಲೆಯನ್ನು ನೀಡಬೇಕು ಏಕಾಏಕಿ ಬೆಲೆ ಕಡಿಮೆ ಮಾಡಿರುವುದು ಸರಿಯಲ್ಲ ಮಾರುಕಟ್ಟೆ ಆರಂಭವಾದ ಕೆಲವೇ ದಿನಗಳಲ್ಲಿ ಏಕಾಏಕಿ ತಂಬಾಕು ಬೆಲೆಯನ್ನು 80 ರಿಂದ 90 ರೂ ಗಳನ್ನು ಕಡಿಮೆ ಮಾಡಿ, ತಂಬಾಕು ಕೈಗೊಳ್ಳಲು ಮುಂದಾಗಿರುವ ಕಂಪನಿಗಳ ಧೋರಣೆ ಸರಿ ಇಲ್ಲ. ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಕೂಡಲೇ ಮಂಡಳಿ ಮತ್ತು ಖರೀದಿದಾರ ಕಂಪನಿಗಳು ರೈತರಿಗೆ ಸರಾಸರಿ ಬೆಲೆ ನಿಗದಿ ಪಡಿಸಬೇಕು ಎಂದರು.
Related Articles
Advertisement
ವಿಷಯ ತಿಳಿದ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ಒದಗಿಸಿ ರಸ್ತೆ ತಡೆ ನಡೆಸಿದ ರೈತರನ್ನು ಮನವೊಲಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದರು.
ಈ ಸಂದರ್ಭದಲ್ಲಿ ತಂಬಾಕು ಮಂಡಳಿಯ ಉಪಾಧ್ಯಕ್ಷ ಎಚ್ ಸಿ ಬಸವರಾಜ್, ತಂಬಾಕು ಹರಾಜು ಅಧೀಕ್ಷಕರಾದ ಪ್ರಭಾಕರನ್, ಶಂಭುಲಿಂಗೇಗೌಡ, ರಾಮಮೋಹನ್ ಸೂರಿ, ರೈತ ಮುಖಂಡರಾದ ರಹಮತ್ ಜಾನ್ ಬಾಬು, ಹೆಮ್ಮಿಗೆ ಮಹೇಶ್, ಶ್ರೀನಿವಾಸ್ ಆರ್ ತುಂಗಾ, ಹರೀಶ್, ಪ್ರತಾಪ’ ನಂದೀಶ ,ರಾಮೇಗೌಡ, ಸೋಮಣ್ಣ, ಕಾಳನಾಯ್ಕ , ಮಹಮದ್, ಯೋಗಣ್ಣ ಸೇರಿದಂತೆ ಸಾವಿರಾರು ರೈತರು ಹಾಜರಿದ್ದರು.