Advertisement

ಜಿಲ್ಲಾದ್ಯಂತ ವಾರಾಂತ್ಯದ ಕರ್ಫ್ಯೂ ಯಶಸ್ವಿ

03:29 PM Apr 26, 2021 | Team Udayavani |

ಹಾಸನ: ಸದಾ ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದನಗರದ ಕಟ್ಟಿನಕೆರೆ ಮಾರುಕಟ್ಟೆ ಭಾನುವಾರಸಂಪೂರ್ಣ ಬಂದ್‌ ಆಗಿತ್ತು. ಕೆಲವು ತರಕಾರಿ ವರ್ತಕರು ಹೊರತುಪಡಿಸಿದರೆ ಬೆಳಗ್ಗೆ ಮಾರುಕಟ್ಟೆಯದಿನಸಿ ಅಂಗಡಿ ಮಂಗಟ್ಟುಗಳೂ ಮುಚ್ಚಿದ್ದವು.

Advertisement

ಮಾರುಕಟ್ಟೆಗೆ ಹೊಂದಿಕೊಂಡಂತಿರುವ ನಗರ ಸಾರಿಗೆಬಸ್‌ ನಿಲ್ದಾಣದತ್ತ ಜನ ಸುಳಿಯಲಿಲ್ಲ. ಬಸ್‌ಗಳುಬಾರದೆ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಗಸ್ತು ಹೆಚ್ಚಿತ್ತು: ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆವರ್ತಕರೂ ಸ್ವಯಂ ಸ್ಫೂರ್ತಿಯಿಂದ ತಮ್ಮಅಂಗಡಿಗಳನ್ನು ಮುಚ್ಚಿದರು. ಮಹಾವೀರ ಜಯಂತಿಹಿನ್ನಲೆಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧವಿದ್ದರೂಬಡಾವಣೆಗಳಲ್ಲಿ ಮಧ್ಯಾಹ್ನದವರೆಗೂ ಕದ್ದುಮುಚ್ಚಿಮಾಂಸ, ಕೋಳಿಗಳ ಮಾರಾಟ ನಡೆಯಿತಾದರೂ ಆನಂತರ ಪೊಲೀಸರ ಗಸ್ತು ಹೆಚ್ಚಿದಂತೆ ಅಂಗಡಿಗಳುಮುಚ್ಚಿದವು.

ಜನರಿಂದ ಸಹಕಾರ: ಸಂಜೆವರೆಗೂ ನಗರದ ಎಲ್ಲಾರಸ್ತೆಗಳೂ ಬಿಕೋ ಎನ್ನುತ್ತಿದ್ದವು. ಕೆಲವು ಕಡೆ ರಸ್ತೆಗಳಿದವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದರು.ಅನಿವಾರ್ಯವಾಗಿ ಸಂಚರಿಸಬೇಕಿದ್ದವರಿಗೆ ಅನುವುಮಾಡಿಕೊಟ್ಟರು. ಕೆಲವಡೆ ವಾಹನಗಳನ್ನು ವಶಕ್ಕೆಪಡೆದರು. ವಾಹನ, ಜನರ ಸಂಚಾರ ಬಹುತೇಕರಸ್ತೆಗಳಲ್ಲಿ ಸ್ತಬ್ಧವಾಗಿದ್ದರಿಂದ ಪೊಲೀಸರು ರಸ್ತೆಬದಿಯ ನೆರಳಿನಾಶ್ರಯ ಪಡೆದುವಿರಮಿಸಿಕೊಳ್ಳುತ್ತಿದ್ದರು. 2ನೇ ದಿನದ ಕರ್ಫ್ಯೂಗೆ ಜನಸಂಪೂರ್ಣ ಸಹಕರಿಸಿದರು.

ಪೊಲೀಸರಿಗೆ ಊಟ ವಿತರಣೆ: ಕರ್ಫ್ಯೂ ವೇಳೆ ಗಸ್ತುಕರ್ತವ್ಯದಲ್ಲಿದ್ದ ಪೊಲೀಸರಿಗೆ ಅಂತಾರಾಷ್ಟ್ರೀಯಮಾನವ ಹಕ್ಕುಗಳ ಸಮಿತಿ ಪದಾಧಿಕಾರಿಗಳುಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ಹಾಸನನಗರದ ಹಳೆ ಶಾಂತಿ ಸ್ಟೋರ್‌ ವೃತ್ತ, ಎನ್‌.ಆರ್‌.ಸರ್ಕಲ್‌, ಡೇರಿ ವೃತ್ತ, ರಿಂಗ್‌ ರಸ್ತೆ ಮತ್ತಿತರ ಕಡೆಸಂಚರಿಸಿ ಸಮಿತಿ ಸದಸ್ಯರು ಊಟ ಮತ್ತುಕುಡಿಯುವ ನೀರು ವಿತರಿಸಿದರು. ಸಮಿತಿ ಜಿಲ್ಲಾಧ್ಯಕ್ಷಸಯ್ನಾದ್‌ ಏಜಾಜ್‌, ರಾಲ್‌, ಜಗನಾಥ್‌, ನವಾಜ್‌,ಆಯುಷ್‌, ಶ್ರುತಿ, ಚಂದ್ರಿಕಾ, ಸಾದಿಕ್‌, ಬಕ್ಷಿಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next