Bhargavastra: ಡ್ರೋನ್ ದಾಳಿ ತಡೆಗೆ ಸೇನಾಗೆ ಭಾರ್ಗವಾಸ್ತ್ರ
Team Udayavani, Jan 16, 2025, 8:39 AM IST
ಹೊಸದಿಲ್ಲಿ: ದೇಶೀಯವಾಗಿ ತಯಾರಿಸಿರುವ ಮೊದಲ ಮೈಕ್ರೋ ಕ್ಷಿಪಣಿಯನ್ನು ಭಾರತ ಬುಧವಾರ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಡ್ರೋನ್ ದಾಳಿಗಳನ್ನು ಈ ಕ್ಷಿಪಣಿ ತಡೆಗಟ್ಟಲಿದ್ದು, ಸೇನೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಒಡಿಶಾದ ಗೋಪಾಲ್‌ಪುರ ಸಮುದ್ರ ತೀರದಲ್ಲಿ ಇದರ ಪರೀಕ್ಷೆಯನ್ನು ನಡೆಸಲಾಗಿದೆ. ಒಟ್ಟು 2 ಪರೀಕ್ಷೆ ಗಳನ್ನು ನಡೆಸಲಾಗಿದ್ದು, ಪರೀಕ್ಷೆಯ ಸಮಯದಲ್ಲಿ 2.5 ಕಿ.ಮೀ. ದೂರದಲ್ಲಿದ್ದ ಗುರಿಯನ್ನು ಈ ಕ್ಷಿಪಣಿ ಯಶಸ್ವಿ ಯಾಗಿ ಹೊಡೆದುರುಳಿಸಿದೆ. ಸುಮಾರು 6 ಕಿ.ಮೀ.ಗಿಂತ ದೂರದಲ್ಲಿದ್ದರೂ ಶತ್ರು ಡ್ರೋನ್‌ಗಳನ್ನು ಈ ಕ್ಷಿಪಣಿ ಯಶಸ್ವಿಯಾಗಿ ಗುರುತಿಸಲಿದೆ. ಎಕನಾಮಿಕ್ಸ್ ಎಕ್ಸ್‌ಪ್ಲೋ ಸೀವ್ ಸಂಸ್ಥೆ ಈ ಕ್ಷಿಪಣಿಯನ್ನು ತಯಾರು ಮಾಡಿದೆ.
ಕ್ಷಿಪಣಿಯ ವಿಶೇಷತೆ: “ಭಾರ್ಗವಾಸ್ತ್ರ’ ಮೈಕ್ರೋ ಕ್ಷಿಪಣಿ ಯಾಗಿದ್ದು, ಒಂದೇ ಬಾರಿಗೆ 64 ಗುರಿಗಳನ್ನು ಇದರ ಮೂಲಕ ಹೊಡೆದುರುಳಿಸಬಹುದು. ಸಾಮಾನ್ಯ ಕ್ಷಿಪಣಿ ಗಳಂತೆ ಇದನ್ನು ಸಾಗಿಸಲು ವಾಹನಗಳ ಆವಶ್ಯಕತೆಯೂ ಬೀಳುವುದಿಲ್ಲ. ಸೈನಿಕರು ತಮ್ಮ ಬ್ಯಾಗ್‌ಗಳನ್ನು ಇದನ್ನು ಕೊಂಡೊಯ್ಯಬಹುದು. ಇದರಲ್ಲಿ ಶಕ್ತಿಶಾಲಿ ರಡಾರ್‌ಗಳನ್ನು ಅಳವಡಿಸಿದ್ದು, ಕೇವಲ 16 ಸೆಕೆಂಡ್‌ಗಳಲ್ಲಿ ಇದು ಶತ್ರು ಡ್ರೋನ್‌ಗಳನ್ನು ಗುರುತಿಸುತ್ತದೆ. ಅಲ್ಲದೆ ವಾಹನ ಗಳ ಮೇಲೆ ಅಳವಡಿಸಿರುವ ಲಾಂಚರ್‌ಗಳ ಮೂಲಕ ಇದನ್ನು ಉಡಾವಣೆ ಮಾಡಲು ಸಾಧ್ಯವಿರುವುದರಿಂದ ಎಲ್ಲಾ ಭೂ ಪ್ರದೇಶಗಳಲ್ಲೂ ಬಳಕೆ ಮಾಡಬಹುದು.
ಇದನ್ನೂ ಓದಿ: Indian Navy: ಭಾರತೀಯ ನೌಕಾಪಡೆಗೆ ದೇಶಿ ನಿರ್ಮಿತ ತ್ರಿವಳಿ ಬಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi polls: ಬಿಜೆಪಿಗ ಸಿಂಗ್ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!
Waqf; 14 ತಿದ್ದುಪಡಿಯೊಂದಿಗೆ ಮಸೂದೆಗೆ ಜೆಪಿಸಿ ಅಂಗೀಕಾರ
Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ
Chhattisgarh: ಚಿಕ್ಕಪಲ್ಲಿಗೆ ಮೊದಲ ಬಾರಿ ವಿದ್ಯುತ್ ಸಂಪರ್ಕ: ಗ್ರಾಮಸ್ಥರ ಹರ್ಷ
One Nation One Election ವರದಿಗೆ ಕೇಂದ್ರದಿಂದ 95,000ರೂ.ವೆಚ್ಚ: ಆರ್‌ಟಿಐ ಮಾಹಿತಿ