Advertisement

ಯಶಸ್ವೀ ಸಾಧನಾ ಸಮಾವೇಶ: ವಿಚಲಿತ ಬಿಜೆಪಿ ವೃಥಾರೋಪ

12:22 PM Jan 10, 2018 | Team Udayavani |

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ 1 ತಿಂಗಳಿನಿಂದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸರಕಾರ ಮಾಡಿದ ಸಾಧನೆಗಳ ಪರಾಮರ್ಶೆ, ಜನರ ಸಮಸ್ಯೆ ಆಲಿಸಲು ಸಾಧನಾ ಸಮಾವೇಶ ಹಮ್ಮಿಕೊಂಡಿದ್ದಾರೆ. ಬ್ರಹ್ಮಾವರದಲ್ಲಿ ನಡೆದ ಸಾಧನಾ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದುದನ್ನು ಕಂಡು ಬಿಜೆಪಿ ದಿಗ್ಭ್ರಮೆಗೊಂಡಿದೆ ಎಂದು ಕಾಂಗ್ರೆಸ್‌ ಹೇಳಿದೆ. 

Advertisement

ಸಮಾವೇಶಕ್ಕೆ ಜನರನ್ನು ಕಲೆ ಹಾಕಲು ವಾಮ ಮಾರ್ಗವನ್ನು ಅನುಸರಿಸಿದ್ದಾರೆ ಎಂಬ ಮಾಜಿ ಬಿಜೆಪಿ ಶಾಸಕರ ಆರೋಪ ಸತ್ಯಕ್ಕೆ ದೂರವಾದದ್ದು. ಫ‌ಲಾನುಭವಿಗಳು ಹಾಗೂ ಜನತೆ ಸ್ವಇಚ್ಛೆಯಿಂದ ಬೃಹತ್‌ ಸಂಖ್ಯೆಯಲ್ಲಿ ಭಾಗವಹಿಸಿರುವುದು ಬಿಜೆಪಿಗೆ ಸಹಿಸಲು ಅಸಾಧ್ಯವಾಗಿದೆ. ಇದರಿಂದ ವಿಚಲಿತರಾಗಿ ವೃಥಾರೋಪ ಮಾಡುತ್ತಿದ್ದಾರೆ.

ಬೈಂದೂರಿನಲ್ಲಿ ನಡೆದ ಸಮಾವೇಶಕ್ಕೆ ಕೊಲ್ಲೂರು ದೇಗುಲದಿಂದ ಭೋಜನ ತರಿಸಲಾಗಿದೆ ಎಂದು ಸುಳ್ಳು ಆರೋಪ ಹೊರಿಸುವ ಮಾಜಿ ಶಾಸಕರು ತಮ್ಮ ಪಕ್ಷದ ರೈತ ಚೈತನ್ಯ ಸಮಾವೇಶ ಉಡುಪಿಯಲ್ಲಿ ನಡೆದಾಗ ಉಡುಪಿಯ ಪ್ರಸಿದ್ದ ಮುಜರಾಯಿ ಆಡಳಿತವಿರುವ ದೇಗುಲದಿಂದ ಭೋಜನ ತರಿಸಿ ದ್ದನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದಿದೆ.

ಸರಕಾರದ ಯೋಜನೆಗಳ ಅನುಷ್ಠಾನ ಜಿಲ್ಲಾಡಳಿತದ ಕರ್ತವ್ಯ. ಜಿಲ್ಲಾಧಿಕಾರಿಗಳು ಹಾಗೂ ಪೌರಾಯುಕ್ತರು ಮುತುವರ್ಜಿ ವಹಿಸಿದರೆ ಅವರನ್ನು ಉಸ್ತುವಾರಿ ಸಚಿವರ ಕೈಗೊಂಬೆಗಳೆಂದು ದೂಷಿಸಿರು ವುದು ಅವರಲ್ಲಿಯ ನೆನಪುಗಳ ಕೊರತೆ ಕಾರಣ. ಬಿಜೆಪಿ ಶಾಸಕರಾಗಿದ್ದ ಅವಧಿಯಲ್ಲಿ ಜಿಲ್ಲಾಡಳಿತ ಅವರ ಆದೇಶಗಳನ್ನು ಪಾಲಿಸಲಿಲ್ಲವೇ? ಸರಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿಲ್ಲವೇ? ಆಗ ಜಿಲ್ಲಾಡಳಿತ ಅವರ ಕೈಗೊಂಬೆಯಾಗಿ ಕಾಣದ್ದು ಈಗ ಕಾಣಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. 

ಸಚಿವ ಪ್ರಮೋದ್‌  ಕಳೆದ ನಾಲ್ಕೂವರೆ ವರ್ಷ ಗಳಲ್ಲಿ 1,900 ಕೋ. ರೂ.ಗೂ ಮಿಕ್ಕಿ ಅನುದಾನ ತಂದು ಅಭಿವೃದ್ಧಿ  ಮಾಡಿದ್ದಾರೆ. ಇದರಿಂದ ಕಂಗಾಲಾದ ಬಿಜೆಪಿಯವರು ಈಗ ಜನಸಾಗರ ಕಂಡು ದಿಗ್ಬಮೆಗೊಂಡು ಮನಬಂದಂತೆ ಮಾತನಾಡು ತ್ತಿದ್ದಾರೆ. ಮಾಜಿ  ಶಾಸಕರ ಅವಧಿಯಲ್ಲಿ ಇಲಾಖೆಗಳಿಂದ ವಸೂಲಿ ಮಾಡಿ ಅನುಭವವಿರಬಹುದು ಎಂದು ಜಿಲ್ಲಾ ಕಾಂಗ್ರೆಸ್‌ ಪ್ರ. ಕಾ. ಬಿ. ನರಸಿಂಹ ಮೂರ್ತಿ, ಬ್ಲಾಕ್‌ ಕಾಂ. ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ಜನಾರ್ದನ ಭಂಡಾರ್ಕರ್‌, ಭಾಸ್ಕರ್‌ ರಾವ್‌ ಕಿದಿಯೂರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next