Advertisement

18 ಸಾವಿರ ಹಳ್ಳಿಗಳಲ್ಲಿ ಉಜ್ವಲ ಯೋಜನೆ ಯಶಸ್ವಿ ಅನುಷ್ಠಾನ’

12:30 AM Mar 02, 2019 | |

ಕಾಪು: ದೇಶದಾದ್ಯಂತ ಪ್ರಚಲಿತದಲ್ಲಿರುವ ಉಜ್ವಲ ಗ್ಯಾಸ್‌ ವಿತರಣೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದ್ದು, ಇದರಿಂದಾಗಿ ಇಂಧನಕ್ಕಾಗಿ ದಿನ ನಿತ್ಯ ಪರದಾಡುವ ಮಹಿಳೆಯರ ಸಂಕಷ್ಟವನ್ನು ದೂರ ಮಾಡುವ ಪ್ರಯತ್ನ ಕೇಂದ್ರ ಸರಕಾರದಿಂದ ನಡೆಯುತ್ತಿದೆ. ಈ ಯೋಜನೆಯ ಮೂಲಕವಾಗಿ ದೇಶದ 18 ಸಾವಿರ ಹಳ್ಳಿಗಳ ಮಹಿಳೆಯರ ಜೀವನದಲ್ಲಿ ಹೊಸ ಉತ್ಸಾಹವನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಕಾಪು ವೀರಭದ್ರ ಸಭಾಭವನದಲ್ಲಿ ಶುಕ್ರವಾರ ಜರಗಿದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಕಾಪು ವಿಧಾನಸಭಾ ಕ್ಷೇತ್ರದ ಸುಮಾರು 40 ಫಲಾನುಭವಿಗಳಿಗೆ ಉಚಿತ ಗ್ಯಾಸ್‌ ಕನೆಕ್ಷನ್‌ ಒದಗಿಸುವ ಮತ್ತು ಸಾಂಕೇತಿತವಾಗಿ ಗ್ಯಾಸ್‌ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನರು ಹೇಳಿದ ಕೆಲಸಗಳನ್ನು ನಾವು ಮಾಡಿದ್ದೇವೆ. ಇದರಲ್ಲಿ ಪಡುಬಿದ್ರಿ ಮತ್ತು ಕುಂದಾಪುರದ ಹೈವೇ ಕೆಸಲ ಪೂರ್ಣಗೊಳಿಸುವಲ್ಲಿ ತಡವಾಗುತ್ತಿರುವುದಕ್ಕೆ ವಿಷಾದವಿದೆ. ಬಿಜೆಪಿಗೆ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ 28 ಸಾವಿರ ಮತಗಳ ಮುನ್ನಡೆ ದೊರಕಿತ್ತು. ಈ ಬಾರಿ ಅಭ್ಯರ್ಥಿ ಯಾರೇ ಆದರೂ ಕೂಡಾ ಮೋದಿಗಾಗಿ ಮತ ಎಂಬ ಚಿಂತನೆಯೊಂದಿಗೆ ಕಾಪು ಕ್ಷೇತ್ರದಲ್ಲೇ 50 ಸಾವಿರ ಮತಗಳಿಗೂ ಹೆಚ್ಚಿನ ಅಂತರದ ಜಯವನ್ನು ಪಕ್ಷಕ್ಕೆ ದೊರಕಿಸಿಕೊಡಬೇಕಿದೆ ಎಂದರು.

ಮತ್ತೂಮ್ಮೆ ಮೋದಿ ಸಂಕಲ್ಪ  ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆ ಸವಾಲಿನ ಚುನಾವಣೆಯಾಗಿದೆ. ರಾಜ್ಯದ ಕರಾವಳಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸಾಧಿಸಿದ ಜಯದ ಮಾದರಿಯಲ್ಲೇ ಮತ್ತೆ ಬಿಜೆಪಿಯ ಸಂಸದರು ಗೆದ್ದು ಬರಬೇಕಿದೆ. ಮೋದಿ ಸರಕಾರದ ಸಾಧನೆಗಳು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮುಖ್ಯ ಅಸ್ತÅವಾಗಲಿದ್ದು, ಮತ್ತೂಮ್ಮೆ ಮೋದಿ ಎಂಬ ಘೋಷಣೆಯೊಂದಿಗೆ ನಾವೆಲ್ಲರೂ ಒಂದಾಗಿ ಮೋದಿಯವರನ್ನು ಮತ್ತೆ ದೇಶದ ಪ್ರಧಾನಿಯನ್ನಾಗಿಸುತ್ತೇವೆ ಎಂಬ ಸಂಕಲ್ಪವನ್ನು ಸ್ವೀಕರಿಸೋಣ ಎಂದರು.

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಪಕ್ಷದ ಉಸ್ತುವಾರಿ ವಿಜಯ್‌ ಕೊಡವೂರು, ಉಡುಪಿ ಜಿ. ಪಂ. ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಪುರಸಭಾ ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಕುಂದರ್‌, ಮುಕಂಡರಾದ ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಸಂಧ್ಯಾ ರಮೇಶ್‌, ಚಂದ್ರ ಮಲ್ಲಾರು, ಸುಧಾಮ ಶೆಟ್ಟಿ, ಕೇಸರಿ ಯುವರಾಜ್‌, ಮುರಳೀಧರ್‌ ಪೈ ಉಪಸ್ಥಿತರಿದ್ದರು.ಕಾಪು ಪುರಸಭಾ ವ್ಯಾಪ್ತಿ ಬಿಜೆಪಿ ಸಮಿತಿ ಅಧ್ಯಕ್ಷ ಸಂದೀಪ್‌ ಶೆಟ್ಟಿ ಕನ್ಯಾನಗುತ್ತು ಸ್ವಾಗತಿಸಿದರು. ಕಾಪು ಪುರಸಭಾ ಸದಸ್ಯ ಕಿರಣ್‌ ಆಳ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next