ನಾಗಮಂಗಲ: ಕೋವಿಡ್ ಸೋಂಕಿತ 28 ಗರ್ಭಿಣಿಯರಿಗೆ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ವೈದ್ಯರು ಮಹತ್ವಕಾರ್ಯ ಮಾಡಿದ್ದಾರೆ.
ಉತ್ತಮ ಚಿಕಿತ್ಸೆ ನೀಡಿ ಯಾವುದೇ ಗರ್ಭಿಣಿಯರ ಹೆರಿಗೆ ಮಾಡಿಸಿ ಸಾರ್ವಜನಿಕರ ಪ್ರಶಂಸೆಗೆ ಕಾರಣರಾಗಿದ್ದಾರೆ. ತಾಲೂಕಿನ ಬಿಜಿ ನಗರದಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆ ಜಿಲ್ಲಾ ಕೇಂದ್ರ ಸ್ಥಾನದಿಂದ ಸುಮಾರು 80 ಕಿ.ಮೀ ದೂರದಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದು, ತಾಲೂಕು ಹಾಗೂಪಕ್ಕದ ಜಿಲ್ಲೆಗಳ ಬಡವರು ಹಾಗೂ ರೈತಾಪಿ ವರ್ಗದವರಿಗೆ ಅನುಕೂಲವಾಗಿದೆ.
ಬಡ ರೋಗಿಗಳಿಗೆ ಸೇವೆ: ಕಳೆದ 6 ತಿಂಗಳಿನಿಂದ ಕೋವಿಡ್ ಸಂಕಷ್ಟಕ್ಕೀಡಾಗಿರುವ ಸಾವಿರಾರುರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯವ್ಯಾಪಿ ಆಸ್ಪತ್ರೆಗಳು ಕೇವಲ ಕೋವಿಡ್ ಚಿಕಿತ್ಸೆಗೆ ಮಾತ್ರ ಸೀಮಿತವಾಗಿದ್ದು, ಇತರೆ ಖಾಯಿಲೆಗಳ ಚಿಕಿತ್ಸೆಗಾಗಿ ರೋಗಿಗಳು ಅಲೆದಾಡುವಂಥ ಪರಿಸ್ಥಿತಿಎದುರಾಗಿದೆ. ಈ ಪರಿಸ್ಥಿತಿಯಲ್ಲೂ ಸೋಂಕಿತರಿಗೆ ಚಿಕಿತ್ಸೆ ನೀಡುವ ಜತೆಗೆ ಕೋವಿಡ್ ಇಲ್ಲದ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿರುವ ಆದಿಚುಂಚನಗಿರಿ ಆಸ್ಪತ್ರೆಯ ಸೇವಾ ಕಾರ್ಯ ಬಡ ರೋಗಿ, ಗರ್ಭಿಣಿಯರು ಹಾಗೂ ತಾಯಿ ಮತ್ತು ಮಗುವಿನ ಪಾಲಿಗೆ ಸಂಜೀವಿನಿಯಾಗಿದೆ.
ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ಸೋಂಕಿತ 18 ಸಾಮಾನ್ಯ ಹೆರಿಗೆ ಹಾಗೂ 10 ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ತಾಯಿ ಮತ್ತು ಮಗು ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೆಂಗಳೂರು, ಹಾಸನ, ರಾಮನಗರ, ತುಮಕೂರು, ಮೈಸೂರು ಜಿಲ್ಲೆ ಸೇರಿದಂತೆ ಮತ್ತಿತರ ಕಡೆಗಳಿಂದ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಗರ್ಭಿಣಿಯರೆಲ್ಲರೂ ಉತ್ತಮ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.
ವೈದ್ಯರಿಗೂ ಸೋಂಕು: ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿದ ಆಸ್ಪೆತ್ರೆಯ ಇಬ್ಬರು ವೈದ್ಯರು ಹಾಗೂ ಮೂವರು ಹೌಸ್ ಸರ್ಜನ್‌ಗಳು ಸೇರಿದಂತೆ 10ಕ್ಕೂ ಹೆಚ್ಚು ದಾದಿಯರಿಗೆ ಸೋಂಕು ತಗುಲಿದೆ. ಆದರೂ, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಆತಂಕಕ್ಕೊಳಗಾಗದೆ ತಮ್ಮ ಸೇವೆ ಸಲ್ಲಿಸುವ ಮೂಲಕ ಗರ್ಭಿಣಿ ಪಾಲಿಗೆ ದೇ ರಾಗಿದ್ದಾರೆ.
ಹೆರಿಗೆಯಾಗಿ ಮನೆಗೆ ತೆರಳಿದ ಬಾಣಂತಿಯೊಬ್ಬರಿ 28 ದಿನಗಳನಂತೆ ತಾಯಿ ಮಗು ಮಗುವಿಗೆ ಸೋಂಕು ದೃಢಪಟ್ಟಿತ್ತು. ಈ ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ ಪರಿಣಾಮ ಗುಣಮುಖರಾಗಿದ್ದಾರೆ.
ಗರ್ಭಿಣಿಯರು ಸೋಂಕು ದೃಢಪಟ್ಟರೂ ಆತಂಕಬೇಡ. ಮುಂಜಾಗ್ರತೆಕ್ರಮವಾಗಿ ತಾಯಿ, ಮಗುವಿಗೆ ಹಾಲುಣಿಸುವಾಗ ಎನ್95 ಮಾಸ್ಕ್ ಧರಿಸುವುದು ಒಳ್ಳೆಯದು. ಮಗುವನ್ನುಕನಿಷ್ಟ 6 ತಿಂಗಳವರೆಗೆ ಇತರರಿಗೆ ಕೊಡದಂತೆ ಜಾಗೃತಿ ವಹಿಸಬೇಕು
.- ಡಾ.ರವೀಂದ್ರ ಪುಕಾಳೆ, ಮುಖ್ಯಸ್ಥರು, ಪ್ರಸೂತಿ ವಿಭಾಗ
ಗರ್ಭಿಣಿಯರು ಸೇರಿದಂತೆ ಇತರೆ ರೋಗಿಗಳಿಗೆ ಕೋವಿಡ್ ಸಂಕಷ್ಟದಲ್ಲೂ ಉತ್ತಮ ಚಿಕಿತ್ಸೆ ನೀಡುವಲ್ಲಿ ನಮ್ಮ ವೈದ್ಯಕೀಯ ತಂಡ ಶ್ರಮಿಸುತ್ತಿದೆ. ಪೂಜ್ಯ ಸ್ವಾಮೀಜಿ ಆಶಯದಂತೆ ಗ್ರಾಮೀಣ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕೆಂಬುದು ಸಂಕಲ್ಪವಾಗಿದೆ.
–ಡಾ.ಸಾಗರ್, ವೈದ್ಯಕೀಯ ಅಧೀಕ್ಷಕ, ಆದಿಚುಂಚನಗಿರಿ ಆಸ್ಪತ್ರೆ
– ಪಿ.ಜೆ.ಜಯರಾಂ