Advertisement

ಕ್ರೀಡೆಯಿಂದ ಯಶಸ್ವಿ ಜೀವನ

11:51 AM Sep 04, 2017 | Team Udayavani |

ಹುಮನಾಬಾದ: ವಿದ್ಯಾರ್ಥಿಗಳು ಶ್ರಮಪಟ್ಟರೆ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಿ ಜೀವನದಲ್ಲಿ ಯಶಸ್ವೀ ಕಾಣಬಹುದು ಎಂದು ಮಾಣಿಕನಗರ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಪೊಲೀಸ್‌ ಪಾಟೀಲ ಹೇಳಿದರು.

Advertisement

ಮಾಣಿಕನಗರ ಗ್ರಾಮದ ಮಾಣಿಕಪ್ರಭು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ
ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದಿನೊಂದಿಗೆ ತಮಗೆ ಆಸಕ್ತಿ ಇರುವ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇಂದಿನ ದಿನಗಳಲ್ಲಿ
ಹೆಚ್ಚು ಯುವಕರು ಟಿವಿ ಹಾಗೂ ಮೂಬೈಲ್‌ಗ‌ಳಲ್ಲಿ ಆಟ ಆಡುತ್ತಿರುವುದು ದುರದುಷ್ಟಕರ ಸಂಗತಿಯಾಗಿದೆ.
ಕ್ರೀಡಾಂಗಣದಲ್ಲಿ ಇಳಿದು ವಿವಿಧ ಕ್ರೀಡೆಗಳನ್ನು ಆಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ಲಿಂಗರಾಜ ಎಖೇಳ್ಳಿ ಮಾತನಾಡಿ, ಆಟಗಳನ್ನು ಆಡುವುದರಿಂದ ಉಲ್ಲಾಸ, ಆತ್ಮವಿಶ್ವಾಸ
ಹೆಚ್ಚುತ್ತದೆ. ದಸರಾ ಕ್ರೀಡಾ ಕೂಟದಲ್ಲಿ ಎಲ್ಲಾ ವಯಸ್ಸಿನವರು ಭಾಗವಹಿಸಲು ಅವಕಾಶವಿದೆ. ತಮ್ಮ ಪ್ರತಿಭೆ ಪ್ರದರ್ಶಿಸಿ
ಉನ್ನತ ಸ್ಥಾನದಲ್ಲಿ ಗೆಲವು ಕಾಣಬೇಕು ಎಂದು ಹೇಳಿದರು. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅನಂತರಡ್ಡಿ ಶಿವರಾಯ,
ಕಾರ್ಯದರ್ಶಿ ವೀರೇಂದ್ರ ಮುರಡೆ, ಚಾಮರಾಜ ಶಿರಮುಂಡೆ, ಶರಣಪ್ಪ ಮಾಲೆ, ಕಿರಣ ಕುಲ್ಕರ್ಣಿ, ಸಿದ್ದಪ್ಪ ಹೆಗ್ಗಣಿ,
ರಮೇಶ, ಬಂಡೆಪ್ಪ ಶ್ರೀಮಂಗಲೆ, ಜೈರಾಜ, ನಾಗರಾಜ ಶಿರಮುಂಡೆ, ಗಣಪತಿ ಪವಾರ್‌, ದಶರಥ ಉಡಬನಳ್ಳಿ, ವೆಂಕಟ ಉಡಬಾಳ, ವಿಜಯಕುಮಾರ ಚಾಂಗಲೇರಾ, ಕಲ್ಲಪ್ಪ ಬೋರೆ, ಸುರೇಶ ಪೊದ್ದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next