Advertisement
ಕೃಷಿ ಉತ್ಪಾದನೆ ಗಣನೀಯ ಪ್ರಮಾಣ ದಲ್ಲಿ ಹೆಚ್ಚಳವಾಗಲು ರೈತರ ಶ್ರಮ ಮತ್ತು ಕೃಷಿಯಲ್ಲಿ ಸಕ್ರಿಯ ಪಾಲುಗಾರಿಕೆ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಜು. 20ರಂದು ಇಲಾಖೆ ನಡಿಗೆ ರೈತರ ಬಾಗಿಲಿಗೆ ಅಭಿಯಾನಕ್ಕೆ ಬೆಳ್ತಂಗಡಿಯಲ್ಲಿ ಚಾಲನೆ ನೀಡಲಾಗಿತ್ತು.
ಬೆಳ್ತಂಗಡಿ ತಾಲೂಕಿನ 48 ಗ್ರಾಮ ಗಳಿಗೆ ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು, ತೋಟ ಗಾರಿಕೆ ಇಲಾಖೆ, ರೇಷ್ಮೆ, ಪಶುಪಾಲನೆ, ಜ್ಞಾನಜ್ಯೋತಿ ಬ್ಯಾಂಕ್, ಗ್ರಾ.ಪಂ. ಸಿಬಂದಿ ಭೇಟಿ ನೀಡಿ ನೂತನ ಕೃಷಿ ತಂತ್ರಗಾರಿಕೆ, ಸಾಲ ಸೌಲಭ್ಯದ ಮಾಹಿತಿ ಒದಗಿಸಿದ್ದಾರೆ. ಇದರಿಂದ ರೈತರು ಹೊಸ ವಿಷಯ ಪಡೆದುಕೊಳ್ಳಲು ಸಹಕಾರಿಯಾಗಿದೆ.
Related Articles
ಜು. 20, 21ರಂದು ಕೃಷಿ ಮಾಹಿತಿ ಸಂಚಾರಿ ಘಟಕವು ಬೆಳ್ತಂಗಡಿ ಹೋಬಳಿಯ 18 ಪಂಚಾಯತ್‌ಗಳಲ್ಲಿ ಸಂಚರಿಸಿದ್ದು, ಜು. 23, 24 ಮತ್ತು 25ರಂದು ಕೊಕ್ಕಡ ಹೋಬಳಿಯ 19 ಪಂಚಾಯತ್‌ಗಳಲ್ಲಿ ಸಂಚರಿಸಿ ಜು. 25ರಂದು ಅಂಬೇಡ್ಕರ್ ಭವನದಲ್ಲಿ ರೈತರೊಡನೆ ಸಂವಾದ, ಕೃಷಿ ಸಂಬಂಧಿತ ತಾಂತ್ರಿಕ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿಟ್ಲ ಕೇಂದ್ರಿಯ ತೋಟಗಾರಿಕೆ ಬೆಳೆಗಳ ಸಂಶೋಧನ ಕೇಂದ್ರದ ವಿಜ್ಞಾನಿ ಎನ್.ಪಿ. ನಾಗರಾಜು ಸಮಗ್ರ ಮಾಹಿತಿ ಒದಗಿಸಿದ್ದಾರೆ.
Advertisement
ಜು. 27, 28ರಂದು ವೇಣೂರು ಹೋಬಳಿಯ 12 ಗ್ರಾ.ಪಂ.ಗಳಿಗೆ ತೆರಳಿದ್ದು, ಜು. 29ರಂದು ವೇಣೂರಿನ ಲಯನ್ಸ್ ಕ್ಲಬ್ ಹಾಲ್‌ನಲ್ಲಿ ಸಂವಾದ, ತಾಂತ್ರಿಕ ಮಾಹಿತಿ ನಡೆಯಲಿದೆ. ಮಂಗಳೂರು ಕೆ.ವಿ.ಕೆ.ಯ ವಿಜ್ಞಾನಿ ಗಳು ಭಾಗವಹಿಸಲಿದ್ದಾರೆ.
ಆವಶ್ಯಕತೆಗಳು, ಸಮಸ್ಯೆಗಳ ಕುರಿತು ಚರ್ಚೆಕೃಷಿ ಇಲಾಖೆ, ಸಹಾಯಕ ತೋಟಗಾರಿಕೆ ಇಲಾಖೆ ಸಹಿತ ಕೃಷಿ ಇಲಾಖೆ ಸಂಬಂಧಿತ ಅಧಿಕಾರಿಗಳು ಸ್ಥಳೀಯ ರೈತರೊಡಗೂಡಿ ಕೃಷಿ ಸಂಬಂಧಿತ ಆವಶ್ಯಕತೆಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ. ಕೃಷಿ ಇಲಾಖೆಯಲ್ಲಿರುವ ಅವಶ್ಯ ಸೌಲಭ್ಯಗಳನ್ನು ರೈತರಿಗೆ ಒದಗಿಸುವುದರ ಜತೆಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ರೈತರಿದ್ದು, ಶೇ. 50 ಮಂದಿ ರೈತರು ಲಾಭ ಪಡೆದಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಪ್ರೇಮಾ ಡಿ.ಕೆ. ತಿಳಿಸಿದ್ದಾರೆ. ರೈತರಿಗೆ ಹೊಸ ವಿಷಯ
ಈ ಬಾರಿ ಅಭಿಯಾನ ಯಶಸ್ವಿಯಾಗಿದೆ. ಮುಂದಿನ ಬಾರಿ ಮತ್ತಷ್ಟು ಪರಿಣಾಮಕಾರಿಯಾಗಲು ಪಂಚಾಯತ್ ಮಟ್ಟದಲ್ಲಿ ಹೆಚ್ಚಿನ ಮಂದಿ ರೈತರು ಸೇರಬೇಕು. ಸಂಘ-ಸಂಸ್ಥೆ, ಗ್ರಾ.ಪಂ.ಗಳ ಶ್ರಮ ಅಗತ್ಯ. ಇದರಿಂದ ರೈತರಿಗೆ ಹೊಸ ವಿಷಯ ತಿಳಿಯಲು ಸಾಧ್ಯ.
- ಪ್ರೇಮಾ ಡಿ.ಕೆ.
ತಾ| ಸ. ಕೃಷಿ ನಿರ್ದೇಶಕರು