Advertisement

ಹೊಸತನದಿಂದ ಉದ್ಯಮದಲ್ಲಿ ಯಶಸ್ಸು : ರಂಗಪ್ರಸಾದ್‌

03:32 PM Sep 24, 2017 | |

ಮಂಗಳೂರು: ಮೂಡ ಬಿದಿರೆ ಬಳಿಯ ಬಡಗಮಿಜಾರಿ ನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಎಂಜಿನಿಯರಿಂಗ್‌ನಲ್ಲಿ (ಮೈಟ್‌) 3 ದಿನಗಳ ಉದ್ಯಮಶೀಲತೆ ಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ.

Advertisement

ಕಾರ್ಯಾಗಾರವನ್ನು ಎಂಟ್ರಿ ಪ್ರನ್ಯೂರ್‌ಶಿಪ್‌ ಡೆವಲಪ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಇಡಿಐಐ) ಅಹಮದಾಬಾದ್‌ ಹಾಗೂ ಮೈಟ್‌ನ ಉದ್ಯಮಶೀಲತೆ ಅಭಿವೃದ್ಧಿ ವಿಭಾಗ ಆಯೋಜಿಸಿದೆ.

ಬೆಂಗಳೂರಿನ ಎಂಎಸ್‌ಎಂಇ ಡೆವಲಪ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ನಿರ್ದೇಶಕ ರಂಗಪ್ರಸಾದ್‌ ಎಸ್‌.ಎನ್‌. ಅವರು ಶಿಬಿರವನ್ನು ಉದ್ಘಾಟಿಸಿ, ಉದ್ಯಮಿಗಳಾಗಲು ಬಯಸುವವರು ಸದಾ ಹೊಸತನದ ಹುಡುಕಾಟದಲ್ಲಿ ನಿರತರಾಗಿರಬೇಕು. ಆತ್ಮವಿಶ್ವಾಸ ಮತ್ತು ಧನಾತ್ಮಕ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಸ್ಪರ್ಧಾ ತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿ ಕೆ. ಸಾಕ್ರೆಟಿಸ್‌ ಅವರು ಮೈಟ್‌ ತನ್ನ ಪೂರ್ವಭಾವಿ ಕ್ರಮಗಳಿಂದ ಕಳೆದ 5 ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಉದ್ಯಮಿಗಳನ್ನು ರೂಪಿಸುವಲ್ಲಿ ಯಶಸ್ಸು ಕಂಡಿದೆ. ಇಂತಹ ಉದ್ಯಮಶೀಲತಾ ಶಿಬಿರಗಳಿಂದ ಮುಂಬರುವ ವರ್ಷಗಳಲ್ಲಿ ಹೆಚ್ಚು ಸಂಖ್ಯೆಯ ವಾಣಿಜ್ಯೋದ್ಯಮಿಗಳು ಮೂಡಿಬರಬೇಕು ಎಂದು ಹೇಳಿದರು.

 ಪ್ರಾಂಶುಪಾಲ ಡಾ| ಜಿ.ಎಲ್‌. ಈಶ್ವರ ಪ್ರಸಾದ್‌ ಸ್ವಾಗತಿಸಿ ಉದ್ಯಮ ಶೀಲತೆ ಅಭಿವೃದ್ಧಿಪಡಿಸುವಲ್ಲಿ ಮೈಟ್‌ ತೆಗೆದುಕೊಂಡ ಉಪಕ್ರಮಗಳ ಕುರಿತು ಮಾಹಿತಿ ನೀಡಿದರು. ಮೆಕಾಟ್ರಾನಿಕ್ಸ್‌ ವಿಭಾಗ ಮುಖ್ಯಸ್ಥ ಹಾಗೂ ಕಾರ್ಯಕ್ರಮದ ಸಂಚಾಲಕ ಸತ್ಯನಾರಾಯಣ ಶಿಬಿರದ ಮಹತ್ವವನ್ನು ವಿವರಿಸಿದರು. ಯುವ ಉದ್ಯಮಿ ರೀತೇಶ್‌ ಮಾತನಾಡಿ, ‘ಐಡಿಯಾಸ್‌ ಮತ್ತು ಇನ್ನೋವೇಶನ್‌’ ಕುರಿತು ಮಾತನಾಡಿದರು.

Advertisement

ಸೃಜನಾತ್ಮಕತೆ, ವ್ಯವಹಾರದ ಅಂಶ, ಎಂಎಸ್‌ಎಂಇ ಘಟಕದ ವಾಣಿಜ್ಯೋದ್ಯಮ ಮತ್ತು ಹಣಕಾಸಿನ ಸೌಲಭ್ಯಗಳು, ವಾಣಿಜ್ಯೋದ್ಯಮಿಗೆ ಬೇಕಾಗಿರುವ ಸಂವಹನ ಕೌಶಲಗಳು, ಉದ್ಯಮ ಪ್ರಾರಂಭಕ್ಕೆ ಪ್ರಾಜೆಕ್ಟ್ ರಿಪೋರ್ಟ್‌ ತಯಾರಿಸುವುದು ಸಹಿತ ವಿವಿಧ ಅಂಶಗಳ ಬಗ್ಗೆ ಶಿಬಿರದಲ್ಲಿ ಮಾಹಿತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next