ಕಲಬುರಗಿ: ಶಿಕ್ಷಣ ಕ್ಷೇತ್ರದಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಯಶಸ್ಸು ನಿಶ್ಚಿತ ಎಂದು ಜಿ.ಪಂ ಮಾಜಿ ಸದಸ್ಯ ಅರುಣಕುಮಾರ ಎಂ. ಪಾಟೀಲ ಹೇಳಿದರು.
ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ, ಭೈರಾಮಡಗಿ ಪ್ರೌಢಶಾಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಅಕ್ಕಮಹಾದೇವಿ ಮಾಯಾಣಿ ಪ್ರತಿಷ್ಠಾನ, ಶಿವ ಬಸವ ಶಿಕ್ಷಣ ಗ್ರಾಮೀಣಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆ, ವಿಶೇಷ ಬೋಧನೆ, ಉಪನ್ಯಾಸ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅನ್ಯ ವಿಷಯದ ಕಡೆ ಲಕ್ಷ್ಯ ವಹಿಸದೇ ಓದಿನತ್ತ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳೇ ಭಾರತದ ಶಿಲ್ಪಿಗಳು. ಆದ್ದರಿಂದ ಜಾಗರೂಕರಾಗಿ ಹೆಜ್ಜೆ ಇಡಬೇಕು ಎಂದರು.
ಕ್ಷೇತ್ರ ಶಿಕ್ಷಣಾ ಧಿಕಾರಿ ಚಿತ್ರಶೇಖರ ದೆಗಲಮಡಿ ಮಾತನಾಡಿ, ರಾಜ್ಯಮಟ್ಟದಲ್ಲೇ ಅತ್ಯುತ್ತಮ ಪ್ರತಿಭೆಗಳು ಸರ್ಕಾರಿ ಶಾಲೆಗಳಿಂದ ಪ್ರತಿವರ್ಷ ಹೊರಹೊಮ್ಮುತ್ತಾರೆ ಎನ್ನುವುದು ಹೆಮ್ಮೆಯ ವಿಷಯ ಎಂದರು.
Related Articles
ಪ್ರೇರಣಾ ಉಪನ್ಯಾಸ ನೀಡಿದ ಪ್ರಕಾಶ ದೇಶಮುಖ, ಸಮಯದ ಸದುಪಯೋಗ, ಪ್ರಾಮಾಣಿಕತೆ, ಶಿಸ್ತು ಮೈಗೂಡಿಸಿಕೊಂಡು ಅಭ್ಯಾಸ ಮಾಡುವಂತೆ ಸಲಹೆ ನೀಡಿದರು. ಬಿಆರ್‌ಸಿ ಸುಧಾಕರ ರಾಠೊಡ, ಶರಣ ಚಿಂತಕ ಶರಣಗೌಡ ಪಾಟೀಲ, ಮುಖ್ಯಶಿಕ್ಷಕ ರಾಜಶೇಖರ ತಲಾರಿ, ಜುಬ್ರಾಯಿಲ್ ಮುಲ್ಲಾ, ಎಂ. ಇಬ್ರಾಹಿಂ, ಸಾವರ ಇಸ್ಮಾಯಿಲ್, ಎಚ್. ಹಿರೇಮಠ ಮಾತನಾಡಿದರು.
ಪ್ರಮುಖರಾದ ಸಂಜು ಬಿರಾದಾರ, ಬಸವರಾಜ ಹೇರೂರ, ಸಂಜುಗೌಡ ಬಿರಾದಾರ, ಎಂ.ವಿ. ಧುತ್ತರಾಗಾಂವ, ಈರಣ್ಣಗೌಡ ಪಾಟೀಲ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಗೋವಿಂದರಾವ್ ಚೌಡಾಪುರಕರ, ಯಲ್ಲಾಲಿಂಗ್ ತಳವಾರ, ಎಸ್ ಡಿಎಂಸಿ ಅಧ್ಯಕ್ಷ ತುಕಾರಾಮ ಯಳಸಂಗಿ, ಶಂಕರ ಬಿ. ಪಾಟೀಲ, ಸಂಪನ್ಮೂಲ ಶಿಕ್ಷಕ ಸೋಮಶೇಖರ ಹಿರೇಮಠ, ಶಿವಕುಮಾರ ಮಾಳಗೆ, ಯೋಗೀಶ ಭಂಡಾರಿ, ಸಿದ್ಧು ಪೂಜಾರಿ, ಸಹ ಶಿಕ್ಷಕರಾದ ಮೋನಪ್ಪ ವಿಶ್ವಕರ್ಮ, ದತ್ತು ನಡುವಿನಕೇರಿ, ಭೀಮರಾಯ ಹಳ್ಳಿ, ಜಯಶ್ರೀ, ವಾಣಿ ಕುಲಕರ್ಣಿ, ಗೀತಾ ಹಿರೇಮಠ, ಇಂದಿರಾ, ನಿರ್ಮಲಾ, ಬಿಬಿ ಆಯೇಷಾ ಸೇರಿದಂತೆ ಏಳು ಶಾಲೆಗಳ ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.
ಮಾಡ್ಯಾಳ ಜೆ.ಪಿ ಪ್ರೌಢಶಾಲೆ ಶಿಕ್ಷಕ ಸಂತೋಷಕುಮಾರ ಖಾನಾಪುರೆ ನಿರೂಪಿಸಿದರು. ಸಿಆರ್‌ಸಿ, ಸಿ.ಎ. ಪಾಟೀಲ ಸ್ವಾಗತಿಸಿದರು, ಶಿವಯೊಗೆಪ್ಪ ಗುಂಜೊಟಿ ವಂದಿಸಿದರು.