ಕುರ್ಲಾ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಬಹಿರಂಗ ಅಧಿವೇಶನವು ಸೆ. 5ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಆ. 29ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭ ಬಹಿರಂಗ ಅಧಿವೇಶನವನ್ನು ವ್ಯವಸ್ಥಿತವಾಗಿ ಆಯೋಜಿಸುವ ಉದ್ದೇಶದಿಂದ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಬಹಿರಂಗ ಅಧಿವೇಶನದ ಪ್ರಧಾನ ಸಮಾರಂಭದ ನಿರೂಪಕರಾಗಿ ಅಶೋಕ್ ಪಕ್ಕಳ, ಸಾಂಸ್ಕೃತಿಕ ಕಾರ್ಯಕ್ರಮದ ಮೇಲ್ವಿಚಾರಕರಾಗಿ ಕರ್ನೂರು ಮೋಹನ್ ರೈ ಅವರನ್ನು ನೇಮಿಸಲಾಯಿತು. ಸ್ವಾಗತ ಸಮಿತಿಯ ನೇತೃತ್ವವನ್ನು ರತ್ನಾಕರ ಶೆಟ್ಟಿ ಮುಂಡ್ಕೂರು, ರವೀಂದ್ರನಾಥ ಭಂಡಾರಿ, ಜಯ ಎ. ಶೆಟ್ಟಿ, ಶಶಿಧರ ಶೆಟ್ಟಿ ಇನ್ನಂಜೆ, ಗುಣಪಾಲ್ ಶೆಟ್ಟಿ ಐಕಳ, ವೇದಿಕೆಯ ವ್ಯವಸ್ಥೆಯಲ್ಲಿ ನವೀನ್ ಶೆಟ್ಟಿ ಇನ್ನಬಾಳಿಕೆ ಮತ್ತು ಶರತ್ ಶೆಟ್ಟಿ, ಆಸನದ ವ್ಯವಸ್ಥೆಯಲ್ಲಿ ವಿಟuಲ್ ಎಸ್. ಆಳ್ವ, ಕ್ಯಾಟರಿಂಗ್ ನೇತೃತ್ವವನ್ನು ಕೃಷ್ಣ ವಿ. ಶೆಟ್ಟಿ, ಸುರೇಶ್ ಶೆಟ್ಟಿ ಪನ್ವೆಲ್, ಸಂತೋಷ್ ಶೆಟ್ಟಿ, ಅತಿಥಿ ಸತ್ಕಾರದಲ್ಲಿ ಗೌತಮ್ ಎಸ್. ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಸಾಗರ್ ಡಿ. ಶೆಟ್ಟಿ, ಅತಿಥಿ ವ್ಯವಸ್ಥೆಯಲ್ಲಿ ಪಿ. ಧನಂಜಯ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಸಂತೋಷ್ ಶೆಟ್ಟಿ, ಡೆಕೊರೇಶನ್ ಮೇಲ್ವಿಚಾರಕರಾಗಿ ರಮೇಶ್ ಶೆಟ್ಟಿ, ಕಾರ್ಯಕ್ರಮ ಸಂಪೂರ್ಣ ವ್ಯವಸ್ಥೆಯಲ್ಲಿ ಪ್ರವೀಣ್ ಶೆಟ್ಟಿ ವರಂಗ, ಪತ್ರಿಕಾ ಪ್ರಚಾರದಲ್ಲಿ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, ಗುರುದತ್ತ್ ಮುಂಡ್ಕೂರು ಅವರನ್ನು ನೇಮಿಸಲಾಯಿತು.
ಇದನ್ನೂ ಓದಿ:ಕಾಂಗ್ರೆಸ್ ಮಾಡಿದ ಸಾರ್ವಜನಿಕ ಆಸ್ತಿಗಳನ್ನು BJP ಖಾಸಗಿ ಪಾಲಿಗೆ ನೀಡುತ್ತಿದೆ:ಎಚ್.ಕೆ.ಪಾಟೀಲ
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಅಂದು ಬೆಳಗ್ಗೆ ಜರಗಲಿರುವ ವಾರ್ಷಿಕ ಮಹಾಸಭೆಗೆ ಹಾಗೂ ಬಹಿರಂಗ ಅಧಿವೇಶನಕ್ಕೆ ದೇಶದ ವಿವಿಧೆಡೆಗಳಿಂದ ಗಣ್ಯರು ಆಗಮಿಸಲಿದ್ದು, ಅಂದಿನ ಕಾರ್ಯಕ್ರಮವು ಅತ್ಯಂತ ವ್ಯವಸ್ಥಿತವಾಗಿ ಯಶಸ್ವಿಗೊಳ್ಳಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಅಧಿವೇಶನದ ಯಶಸ್ಸಿಗೆ ಸರ್ವರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಒಕ್ಕೂಟದ ಉಪ ಕಾರ್ಯಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಕೃಷ್ಣ ವಿ. ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ರವೀಂದ್ರನಾಥ ಭಂಡಾರಿ, ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ, ವಿಟuಲ್ ಎಸ್. ಆಳ್ವ, ಶಶಿಧರ ಶೆಟ್ಟಿ ಇನ್ನಂಜೆ, ಗುಣಪಾಲ್ ಶೆಟ್ಟಿ ಐಕಳ, ಸುರೇಶ್ ಶೆಟ್ಟಿ ಪನ್ವೇಲ್, ಗೌತಮ್ ಎಸ್. ಶೆಟ್ಟಿ, ಸಂತೋಷ್ ಶೆಟ್ಟಿ ಪಿ., ಧನಂಜಯ ಶೆಟ್ಟಿ, ಪ್ರಸನ್ನ ಶೆಟ್ಟಿ, ಪ್ರವೀಣ್ ಶೆಟ್ಟಿ ವರಂಗ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.