Advertisement

ಯಶಸ್ಸು ವಿಮರ್ಶಕನ ಮಾನದಂಡವಲ್ಲ : ವಿಸಾಜಿ

09:51 PM Dec 29, 2021 | Team Udayavani |

ಬಸವಕಲ್ಯಾಣ: ವರ್ತಮಾನದ ಸಂದರ್ಭಕ್ಕೆ, ಟ್ರೆಂಡ್‌ ಗೆ, ಜನಪ್ರಿಯತೆಗೆ ಕಟ್ಟುಬಿದ್ದು ವಿಮರ್ಶೆ ಮಾಡಿದರೆ ಅಂಥಹ ವಿಮರ್ಶೆ ನಿಶ್ಚಲಯವಾಗುತ್ತದೆ. ಯಶಸ್ಸು ವಿಮರ್ಶಕನ ಮಾನಂದಂಡವಲ್ಲ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ವಿಮರ್ಶಕ ವಿಕ್ರಮ ವಿಸಾಜಿ ಹೇಳಿದರು.

Advertisement

ಕನ್ನಡ ಅಭಿವೃದ್ಧಿ ಪ್ರಾ ಧಿಕಾರ ಹಾಗೂ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಸಹಯೋಗದಲ್ಲಿ ನಗರದ ಎಸ್‌ಎಸ್‌ಕೆಬಿ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ವಿಮಶಾì ಕಮ್ಮಟದ ದಿಕ್ಸೂಚಿ ಭಾಷಣ ಮಾಡಿ, ಯಶಸ್ಸಿನ ಮಾನದಂಡ ಸೃಜನಶೀಲ ಲೇಖಕರಿಗೆ ಅನ್ವಯಸುತ್ತದೆಯೇ ಹೊರತು ವಿಮರ್ಶಕನಿಗಲ್ಲ ಎಂದರು. ವಿಮರ್ಶೆಯ ಪ್ರತಿಯೊಂದು ಲೇಖನಗಳು ಪ್ರಯತ್ನವಷ್ಟೇ. ಅಹಂಕಾರ ನಿರಸನಕ್ರಿಯೆ ವಿಮರ್ಶೆಯಲ್ಲಿ ನಿರಂತರ ನಡೆಯುತ್ತಿರುತ್ತದೆ. ವಿಮರ್ಶೆಯು ಕೃತಿಯ ಅಂತಃಸತ್ವಕ್ಕೆ ತಲುಪುವ ಮಾರ್ಗ. ಮಹಾನ್‌ ಕೃತಿ ಯಾವುದೇ ಒಂದು ವಿಮರ್ಶೆಯ ಮಾನದಂಡಕ್ಕೆ ಸಿಗುವುದಿಲ್ಲ.

ವಿಮರ್ಶೆಯಲ್ಲಿ ಲೇಖಕ ಗೌಣವಾಗಿ ಅವನ ಕೃತಿ ಮುಖ್ಯವಾಗುತ್ತದೆ. ಪಠ್ಯ ವಿಮರ್ಶೆಯ ಎರಡು ಕ್ರಮದಲ್ಲಿ ಬೆಳೆಯತ್ತದೆ. ಪಠ್ಯದ ಒಳಗಿನಿಂದ ಒದಗುವ ಸೂಚನೆಗಳಿಂದ ಕೃತಿ ವಿಮರ್ಶೆಯಾಗುತ್ತದೆ. ಪಠ್ಯ ಹೊರಗಿನ ಓದು ಮತ್ತು ವಾದಗಳು ವಿಮರ್ಶೆಯ ದಾರಿಗಳಾಗಿವೆ ಎಂದರು. ಗುಲಬರ್ಗಾ ವಿವಿ ಕುಲಸಚಿವ ಶರಣಬಸಪ್ಪ ಕೊಟಪ್ಪಗೋಳ್‌ ವಿಮಶಾì ಕಮ್ಮಟ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಕ್ರಿಯಾಶೀಲವಾಗಿಡುವ ಶಕ್ತಿ ವಿಮರ್ಶೆಗಿದೆ. ಎಲ್ಲವನ್ನು ಮೌಲ್ಯಮಾಪನ ಮಾಡುವುದು, ವಿಮರ್ಶೆ ಚೌಕಟ್ಟಿಗೆ ತರುವುದು ಇಂದಿನ ಅಗತ್ಯ. ವಿಮರ್ಶೆಯಿಂದ ಸಾಮಾಜಿಕ ಪ್ರಜ್ಞೆ, ವ್ಯಕ್ತಿಗತ ಅರಿವು ಮೂಡುತ್ತದೆ ಎಂದರು. ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ| ಎಚ್‌.ಟಿ. ಪೋತೆ ಮಾತನಾಡಿ, ರಾಗದ್ವೇಷವಿಲ್ಲದೇ ವ್ಯಕ್ತಿ-ಕೃತಿ ಸಮಾಜವನ್ನು ಅನುಸಂಧಾನ ಮಾಡುವ ಕ್ರಮವೇ ವಿಮರ್ಶೆ.

ಬಸವಾದಿ ಶರಣರು ಕನ್ನಡದ ಮೊದಲ ಸಾಮಾಜಿಕ ಮತ್ತು ಚಾರಿತ್ರಿಕ ವಿಮರ್ಶಕರು ಎಂದರು. ಡಾ| ಭೀಮಾಶಂಕರ ಮಾತನಾಡಿ, ಕಾಲಕಾಲಕ್ಕೆ ರೂಪಗೊಂಡ ವಿಮರ್ಶೆ ಅನೇಕ ಆಯಾಮಗಳು ಕಲಸಿಕೊಟ್ಟಿವೆ. ಪಾಶ್ಚಾತ್ಯ ಮತ್ತು ದೇಶಿ ಚಿಂತನೆಗಳು ವಿಮರ್ಶೆ ಮಾನದಂದ ಆದರೂ, ವಿಮರ್ಶೆ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನೆಲೆಗಳಿಗೆ ಆಳದಲ್ಲಿ ಸ್ಪರ್ಶಿಸಿ ಅದು ಬಹುತ್ವವು ಸಬಾಲ್ಟರ್ನ್ ಮಹಿಳಾ ಚಿಂತನೆಗಳು ಕುರಿತು ಬೌದ್ಧಿಕ ರೂಪ ತಳೆದಿದೆ ಎಂದರು. ಸಾಹಿತಿ ಡಾ| ಶ್ರೀಶೈಲ ನಾಗರಾಳ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಬಸವರಾಜ ಎವಲೆ ಮಾತನಾಡಿದರು.

ಈ ವೇಳೆ ಸಿಯುಕೆ ಪ್ರಾಧ್ಯಾಪಕರಾದ ಮಹೇಂದ್ರ ಎಂ., ಡಾ| ಪ್ರಕಾಶ ಬಾಳಿಕಾಯಿ, ಅಬ್ದುಲ್‌ ಮಾಸಿದ ಮಣಿಯಾರ್‌, ದಾವಣಗೆರೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ| ಮಹಾಂತೇಶ ಪಾಟೀಲ, ಶಿವಕುಮಾರ ಪಾಟೀಲ ಇತರರಿದ್ದರು. ಡಾ| ಭೀಮಾಶಂಕರ ಬಿರಾದಾರ ಸ್ವಾಗತಿಸಿದರು. ಪ್ರೊ| ವಿಠೊಬಾ ಡೊಣ್ಣೆ ಗೌಡರು ನಿರೂಪಿಸಿದರು, ದೇವೇಂದ್ರ ಬರಗಾಲೆ ವಂದಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next