Advertisement

ಶಿಸ್ತು ಅಳವಡಿಸಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ

03:03 PM Apr 24, 2017 | |

ಹುಬ್ಬಳ್ಳಿ: ಸಮಯ ಸದುಪಯೋಗ ಪಡಿಸಿಕೊಂಡು, ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ವಿಧಾನಸಭೆ ವಿರೋಧ ಪಕ್ಷದ  ನಾಯಕ ಜಗದೀಶ ಶೆಟ್ಟರ ಹೇಳಿದರು. ಜೆ.ಸಿ. ನಗರದ ಮಹಿಳಾ ಕಾಲೇಜಿನ ಮೂಜಗಂ ಸಭಾಭವನದಲ್ಲಿ ಆಯೋಜಿಸಿದ್ದ ಗುರುದೇವ ವಾಣಿಜ್ಯ ವಿದ್ಯಾಲಯದ ಸ್ವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ನಾನು ಕಾನೂನು ವಿದ್ಯಾರ್ಥಿಯಾಗಿದ್ದಾಗ ಗುರುದೇವ ವಾಣಿಜ್ಯ ವಿದ್ಯಾಲಯದಲ್ಲಿ ಟೈಪಿಂಗ್‌  ಕಲಿಯಲು ಅವಕಾಶ ಲಭಿಸಿದ್ದು ನನ್ನ ಸುದೈವ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಟೈಪಿಂಗ್‌ ಜಾಗದಲ್ಲಿ ಕಂಪ್ಯೂಟರ್‌ ಬಂದಿರಬಹುದು, ಆದರೆ, ಟೈಪಿಂಗ್‌ ಹಾಗೂ  ಶಾರ್ಟ್‌ಹ್ಯಾಂಡ್‌ ರಾಜಕೀಯ ಜೀವನದಲ್ಲಿ ಹಲವು ಬಾರಿ ಪ್ರಯೋಜನಕ್ಕೆ ಬಂದಿದೆ.

ಕಲಿತ ಯಾವುದೇ ವಿದ್ಯೆ ಹಾಳಾಗುವುದಿಲ್ಲ. ಉಪಯೋಗಕ್ಕೆ ಬಂದೇ ಬರುತ್ತದೆ ಎಂದರು.  ಸಂಸ್ಥೆ ಕಟ್ಟಿ ಬೆಳೆಸುವುದು ಕಷ್ಟದ ಕೆಲಸ. ಗುರುದೇವ ವಾಣಿಜ್ಯ ವಿದ್ಯಾಲಯವನ್ನು ಕಳೆದ 50 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು  ತಿಳಿಸಿದರು. 

ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಸಮಯಕ್ಕೆ ಗೌರವ ನೀಡುವುದನ್ನು ಕಲಿತರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಪಡೆಯಬಹುದು. ಸಮಯ  ಹಾಳು ಮಾಡುವ ಪರಿಪಾಠ ಯುವಕರಲ್ಲಿ ಬೆಳೆಯುತ್ತಿರುವುದು ಬೇಸರದ ಸಂಗತಿ ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಜಿ.ಆರ್‌. ಅಂದಾನಿಮಠ ಅವರು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.

ಇಲ್ಲಿ ಕಲಿತ ಸಹಸ್ರಾರು ವಿದ್ಯಾರ್ಥಿಗಳಲ್ಲಿ ಸಮಯ ಪರಿಪಾಲನೆ ಹಾಗೂ ಶಿಸ್ತು ಬೆಳೆಸುವಲ್ಲಿ ಸಂಸ್ಥೆ ಮಹತ್ತರ ಪಾತ್ರ ವಹಿಸಿದೆ ಎಂದರು. ಜಿ.ಆರ್‌. ಅಂದಾನಿಮಠ, ಅಬ್ದುಲ್‌ ಕರೀಮ್‌, ಆರ್‌.ಬಿ. ಗದಗಕರ, ಎಸ್‌.ಆರ್‌. ಭಾಂಡಗೆ, ಪ್ರಭಾವತಿ ಕೋಟಕರ, ಲಿಂಗರಾಜ ಇಂಗಳಹಳ್ಳಿ, ಕಿರಣ ಅಂದಾನಿಮಠ, ಸಿ.ಪಿ. ಪಡಚಣ್ಣವರ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next