Advertisement

ಸತತ ಪರಿಶ್ರಮದಿಂದ ಯಶಸ್ಸು: ವಿನಯ ಹೆಗ್ಡೆ

09:17 PM Jun 03, 2019 | Team Udayavani |

ಕಾರ್ಕಳ: ಸ್ಪಷ್ಟ ಗುರಿಯೊಂದಿಗೆ ಸತತ ಪ್ರಯತ್ನ, ಪರಿಶ್ರಮವಿದ್ದಲ್ಲಿ ಯಶಸ್ಸು ಖಂಡಿತವೆಂದು ನಿಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾ ಧಿಪತಿ ಎನ್‌. ವಿನಯ ಹೆಗ್ಡೆ ಹೇಳಿದರು.

Advertisement

ಜೂ. 3ರಂದು ನಿಟ್ಟೆ ವಿದ್ಯಾಸಂಸ್ಥೆಯ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ| ಎನ್‌.ಎಸ್‌.ಎ.ಎಂ. ಶಿಕ್ಷಣ ಸಂಸ್ಥೆಗಳ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೀವನದಲ್ಲಿ ಸಾಧನೆ ಮಾಡಲು ಅಂಕಗಳಿಕೆಯೊಂದೇ ಮಾರ್ಗವಲ್ಲ. ಯಾವುದೇ ಕ್ಷೇತ್ರದಲ್ಲಾದರೂ ಕಠಿನ ಪರಿಶ್ರಮವಿದ್ದಲ್ಲಿ ಸಾಧನೆಯ ಶಿಖರವನ್ನೇರಬಹುದು. ಅಂಕ ಗಳಿಕೆಯ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದರು.

ರಿಜಿಸ್ಟ್ರಾರ್‌ ಯೋಗೀಶ ಹೆಗ್ಡೆ ಮಾತನಾಡಿ, ಪರೀಕ್ಷೆಗಳಲ್ಲಿ ಸಂಸ್ಥೆಯ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಟ್ಟೆ ಎನ್‌.ಎಂ.ಎ.ಎಂ. ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ಎನ್‌. ನಿರಂಜನ್‌ ಚಿಪಳೂಣರ್‌ ಮಾತನಾಡಿ, ಎಂಜಿನಿಯರಿಂಗ್‌, ವೈದ್ಯಕೀಯ ಹೊರತಾಗಿ ಯಾವುದೇ ಕೋರ್ಸ್‌ಗಳಲ್ಲೂ ವಿದ್ಯಾರ್ಥಿಗಳು ಮುಂದುವರಿಯಬಹು ದಾಗಿದ್ದು ಪ್ರತಿ ಕ್ಷೇತ್ರದಲ್ಲೂ ವಿಫುಲ ಅವಕಾಶಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.

Advertisement

ಎಸೆಸೆಲ್ಸಿ, ಸಿಬಿಎಸ್‌ಸಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಡಾ| ಎನ್‌.ಎಸ್‌.ಎ.ಎಂ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ರಾಧಾ ಪ್ರಭು ಪ್ರಾಸ್ತಾವಿಸಿದರು. ಕನ್ನಡ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಎನ್‌. ಅರವಿಂದ ಕುಮಾರ್‌ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಅಕ್ಷಯಾ ಗೋಖಲೆ ನಿರೂಪಿಸಿದರು. ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಮಾನಸಾ, ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ಉಪನ್ಯಾಸಕಿ ಸಂಧ್ಯಾ ಕೆ. ಪುರಸ್ಕೃತರ ಹೆಸರು ವಾಚಿಸಿದರು. ಸಂಸ್ಥೆಯ ಪ್ರಾಂಶುಪಾಲ ವಾಸುದೇವ ಭಟ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next