Advertisement

ಅನುಭವಾತ್ಮಕ ಕಲಿಕೆಯಿಂದ ಯಶಸ್ಸು

05:30 PM Mar 23, 2021 | Team Udayavani |

ಚಿತ್ರದುರ್ಗ: ಅನುಭವಾತ್ಮಕ ಕಲಿಕೆಯಿಂದ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ ರೆಡ್ಡಿ ಹೇಳಿದರು.

Advertisement

ನಗರದ ಡಯಟ್‌ನಲ್ಲಿ ಸೋಮವಾರ ಸಮಗ್ರ ಶಿಕ್ಷಣ ಕರ್ನಾಟಕ, ರಾಜ್ಯ ಶಿಕ್ಷಣ ಸಂಶೋಧನೆ ತರಬೇತಿ ಇಲಾಖೆ ಮತ್ತು ಡಯಟ್‌ ವತಿಯಿಂದ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಸ್‌ಡಿಎಂಸಿ ವತಿಯಿಂದ ಪ್ರಾರಂಭಿಸಿರುವ ಎಲ್‌.ಕೆ.ಜಿ ಶಿಕ್ಷಕಿಯರಿಗೆ ಆಯೋಜಿಸಿದ್ದ ಬುನಾದಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮನೆ ನಿರ್ಮಿಸಲು ಭದ್ರ ಬುನಾದಿಯ ಅಗತ್ಯವಿರುವಂತೆ ಶಿಕ್ಷಣದಲ್ಲಿ ಪ್ರಗತಿ ಕಾಣಲು ಪೂರ್ವ ಪ್ರಾಥಮಿಕ ಶಿಕ್ಷಣ ಭದ್ರ ಬುನಾದಿ ಒದಗಿಸುತ್ತದೆ. ಈ ಹಂತದಲ್ಲಿ ಮಕ್ಕಳ ಮನಸ್ಸು ಮುಗ್ಧತೆಯಿಂದ ಕೂಡಿದ್ದು ಸ್ವತ್ಛ ಪಾಠಿ (ಸ್ಲೇಟ್‌) ಯಂತೆ ಇರುತ್ತದೆ. ನಾವು ಯಾವ ವಿಷಯವನ್ನು ಕಲಿಸುತ್ತೇವೆಯೋ ಮಗು ಅದೇ ವಿಷಯವನ್ನುಕಲಿಯುತ್ತದೆ.

ಪೂರ್ವ ಪ್ರಾಥಮಿಕ ಹಂತದಲ್ಲಿ ಶಿಕ್ಷಕಿಯರು ಮಕ್ಕಳಿಗೆ ತಾಯಿ ಪ್ರೀತಿ ತೋರಿಸುವ ಮೂಲಕ ಸಮಾಜಕ್ಕೆ ಸುಗಂಧ ಪಸರಿಸುವ ವ್ಯಕ್ತಿತ್ವರೂಪಿಸಬೇಕು ಎಂದರು. ಪ್ರಚಾರ್ಯ ಎಸ್‌.ಕೆ.ಬಿ. ಪ್ರಸಾದ್‌ ಮಾತನಾಡಿ, ಪೂರ್ವ ಪ್ರಾಥಮಿಕ ಹಂತದ ಮಕ್ಕಳಲ್ಲಿ ಕಲಿಕಾ ಆಸಕ್ತಿ, ಬೌದ್ಧಿಕ ಸಾಮರ್ಥ್ಯ ಹೆಚ್ಚಿದ್ದು ಅವರಲ್ಲಿ 2 ರಿಂದ 3 ಭಾಷೆಗಳನ್ನು ಕಲಿಯುವ ಸಾಮರ್ಥ್ಯವಿರುತ್ತದೆ. ಮಗು ರಚನಾತ್ಮಕ ಕಲಿಕೆಯ ಮೂಲಕ ತನ್ನ ಜ್ಞಾನವನ್ನು ಕಟ್ಟಿಕೊಳ್ಳಲು ಮಕ್ಕಳ ಸ್ನೇಹಿಯಾಗಿ ಆಟ, ಹಾಡು, ಕಥೆ, ಚಟುವಟಿಕೆಗಳ ಮೂಲಕ ಗುರು ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಲು ಸಕಾರಾತ್ಮಕ ಚಿಂತನೆ ಬೆಳೆಸಬೇಕು ಎಂದು ತಿಳಿಸಿದರು.

ನೋಡಲ್‌ ಅಧಿ ಕಾರಿ ಕೆ.ಜಿ. ಪ್ರಶಾಂತ್‌, ಉಪನ್ಯಾಸಕರಾದ ಎನ್‌. ರಾಘವೇಂದ್ರ, ಎಸ್‌. ಬಸವರಾಜು, ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾರಾಣಿ, ಸಂಪನ್ಮೂಲ ವ್ಯಕ್ತಿಗಳಾದ ಕೆ. ಉಷಾ, ಕವಿತಾ ಇ. ಮತ್ತು ಚಳ್ಳಕೆರೆ, ಹೊಳಲ್ಕೆರೆ,ಹಿರಿಯೂರು ತಾಲೂಕಿನ ಶಿಕ್ಷಕಿಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next