Advertisement

ವಿಘ್ನಗಳ ದಾಟಿ ಮುನ್ನಡೆದರೆ ಯಶಸ್ಸು

12:19 PM Nov 21, 2017 | Team Udayavani |

ಬೀದರ: ಗ್ರಾಮಗಳು ಕೇವಲ ವಿಸ್ತಾರವಾಗದೇ ವಿಕಾಸವಾಗಬೇಕು. ಜನರು ಮನಸು ಸಂಕುಚಿತವಾಗಿರದೇ ವಿಶಾಲ ಮತ್ತು ಉದಾರವಾಗಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಅಕ್ಕ ಅನ್ನಪೂರ್ಣ ತಾಯಿ ಹೇಳಿದರು.

Advertisement

ರಾಜಗೀರಾ ಗ್ರಾಮದಲ್ಲಿ ಗ್ರಾಮ ವಿಕಾಸ ಸಮಿತಿ ಹಮ್ಮಿಕೊಂಡಿದ್ದ “ಜೀವನ ದರ್ಶನ’ ಪ್ರವಚನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಯಾವುದೂ ಶಾಶ್ವತವಾದದ್ದಲ್ಲ. ಇರುವಷ್ಟು ದಿನ ಎಲ್ಲರ ಜೊತೆ ಚೆನ್ನಾಗಿದ್ದುಕೊಂಡು ಒಳ್ಳೆಯ ಕಾಯಕಗಳನ್ನು ಮಾಡುತ್ತಿರಬೇಕು. ಒಳ್ಳೆ ಕೆಲಸಗಳಿಗೆ ವಿಘ್ನಗಳು ಎದುರಾಗುವುದು ಸಹಜ. ಆದರೆ, ಅವುಗಳಿಗೆ ಹೆದರದೇ ಮುನ್ನಡೆದರೆ ಯಶಸ್ಸು ನಿಶ್ಚಿತ ಎಂದು ಹೇಳಿದರು

ಸಾಮಾಜಿಕ ಕಾರ್ಯಕರ್ತ ರಾಜಶೇಖರ ಹುಬ್ಬಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದ ಯುವ ಸಮೂಹ ಯಾವುದೇ ಜಾತಿಯನ್ನದೇ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗಾಗಿ ಗ್ರಾಮ ವಿಕಾಸ ಸಮಿತಿಯನ್ನು ರಚಿಸಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದರು. 

 ರಮೇಶ ಮಠಪತಿ ಮಾತನಾಡಿದರು. ಬಸವರಾಜ ರೆಡ್ಡಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಸಂತೋಷಿ ಮಠಪತಿ ವಚನ ಗಾಯನ ನಡೆಸಿಕೊಟ್ಟರು. ಶಿವಾನಂದ ದೇಶಪಾಂಡೆ ಸ್ವಾಗತಿಸಿದರು. ಅಶೋಕ ಚಿಂತಾ ವಂದಿಸಿದರು. ಉದ್ಯಮಿಗಳಾದ ಜಯರಾಜ ಖಂಡ್ರೆ, ರಾಚಪ್ಪಾ ಪಾಟೀಲ, ಗುರಪ್ಪಾ ಹತ್ತಿ, ಡಾ| ನೀಲಕಂಠ ಚೆನಶೆಟ್ಟಿ, ಗೋಪಾಲಸಿಂಗ್‌ ಠಾಕೂರ, ಲೊಕೇಶ ವರವಟ್ಟೆ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next